3. SAT (ಸಮಾಜವಿಜ್ಞಾನ)

(ಒಟ್ಟು 150 ಪ್ರಶ್ನೆಗಳು)
 
 
 
 
ಇತಿಹಾಸ.


1) 'ಇಂಡಿಕಾ' ಮೆಗಾಸ್ಟಾನೀಸನು ರಚಿಸಿದ ಕೃತಿಯಾಗಿದ್ದರೆ, ಫ್ಯಾಬಿಯನ್‌ರ ಸಾಹಿತ್ಯ ಕೃತಿ
1) ಸಿ-ಯು-ಕಿ
2) ಜಿಯಾಗ್ರಫಿ
3) ತುಜ್ಕ್-ಎ-ಬಾಬ್ರಿ
4) ಘೋ-ಕೋ-ಕಿ ✔️



2) 'ಪೃಥಿವಿರಾಜ ರಾಸೊ' ಕೃತಿಯ ಲೇಖಕ
1) ಚಾಂದ್ ಬರ್ದಾಯಿ ✔️
2) ಕಲ್ಹಣ
3) ವಿಶಾಖದತ್ತ
4) ಬಾಣಭಟ್ಟ


3) ಅಶೋಕನು ʼಧರ್ಮಮಹಾಮಾತ್ರʼ ಎಂಬ ಅಧಿಕಾರಿಗಳನ್ನು ನೇಮಿಸಿದ ಉದ್ದೇಶ 
1) ಹಿಂದೂ ಧರ್ಮದ ತತ್ವಗಳನ್ನು ಪ್ರಚಾರ ಮಾಡಲು
2) ಧಾರ್ಮಿಕ ಕೇಂದ್ರಗಳನ್ನು ನಿರ್ಮಿಸಲು
3) ಬೌದ್ಧಧರ್ಮದ ತತ್ವಗಳನ್ನು ಪ್ರಚಾರ ಮಾಡಲು ✔️
4) ಬುದ್ಧನ ಬೋಧನೆಗಳನ್ನು ಸಂಗ್ರಹಿಸಲು



4) ಈ ಕೆಳಕಂಡವುಗಳಲ್ಲಿ ಗಂಗರ ಕಾಲದಲ್ಲಿ ರಚನೆಯಾದ ಗ್ರಂಥಗಳನ್ನು ಗುರುತಿಸಿ.
1) ಶಬ್ಧಾವತಾರ, ಗಜಶಾಸ್ತ್ರ, ಗಜಸ್ಟಕ ✔️
2) ಕೌಮುದಿಮಹೋತ್ಸವ, ಹರ ಪಾರ್ವತಿಯ, ಕವಿರಾಜಮಾರ್ಗ
3) ಗದಾಯುದ್ಧ, ಪಂಚತಂತ್ರ, ವಿಕ್ರಮಾಂಕದೇವಚರಿತ
4) ಧರ್ಮಮೃತ, ಮಿತಾಕ್ಷರ, ಮನಸೊಲ್ಲಾಸ



5) ಹೊಯ್ಸಳರ ಆಳ್ವಿಕೆಯಲ್ಲಿ ನೇಮಕಗೊಂಡಿದ್ದ  'ಗರುಡ' ಎಂಬ ಗುಂಪಿನ ಜವಾಬ್ಧಾರಿ
1) ತೆರಿಗೆ ಸಂಗ್ರಹಿಸುವ ಒಂದು ಗುಂಪು
2) ರಾಣಿಯ ಸಹಾಯಕರು
3) ನಗರಗಳನ್ನು ರಕ್ಷಿಸುವ ಅಧಿಕಾರಿಗಳು
4) ರಾಜನಿಗಿದ್ದ ವಿಶೇಷ ಅಂಗರಕ್ಷಕ ಪಡೆ ✔️



6) ರಾಷ್ಟ್ರಕೂಟ ರಾಜವಂಶದ ಆಡಳಿತಗಾರರ ಕಾಲಾನುಕ್ರಮ
1.ಕೃಷ್ಣ, ಇಮ್ಮಡಿ ಗೋವಿಂದ, ಧೃವ, ಮುಮ್ಮಡಿ ಗೋವಿಂದ, ಅಮೋಘ ವರ್ಷ✔️
2. ಇಮ್ಮಡಿ ಗೋವಿಂದ,ಕೃಷ್ಣ, ಧೃವ, ಮುಮ್ಮಡಿ ಗೋವಿಂದ, ಅಮೋಘ ವರ್ಷ
3.ಧೃವ, ಕೃಷ್ಣ, ಇಮ್ಮಡಿ ಗೋವಿಂದ, ಮುಮ್ಮಡಿ ಗೋವಿಂದ, ಅಮೋಘ ವರ್ಷ
4.ಅಮೋಘ ವರ್ಷ, ಕೃಷ್ಣ, ಇಮ್ಮಡಿ ಗೋವಿಂದ, ಧೃವ, ಮುಮ್ಮಡಿ ಗೋವಿಂದ



7) ಅಶೋಕನ ಶಾಸನಗಳನ್ನು ಮೊದಲ ಬಾರಿಗೆ ಬಿಡಿಸಿ ಓದಿದವರು
1.ಜಾರ್ಜ್ ಫ್ಯಾಬ್ರಿಕಿಯಸ್
2. ಥಿಯೋಡರ್ ಮೊಮ್ಸೆನ್
3. ಜೇಮ್ಸ್ ಪ್ರಿನ್ಸ್ಪಪ್ ✔️
4. ಲೂಯಿಸ್ ರಾಬರ್ಟ್


8) ಸರಿಯಾಗಿ ಹೊಂದಿಕೆಯಾಗುವ ಗುಂಪನ್ನು ಆರಿಸಿ
1. ಕೌಟಿಲ್ಯ
2. ರಾಜ ಹಲಾ
3.ವಿಶಾಖದತ್ತ
4. ಕಲ್ಹಣ

ಎ) ಗಾಥಾಸಪ್ತಶತಿ
ಬಿ) ಅರ್ಥಶಾಸ್ತ್ರ
ಸಿ) ರಾಜತರಂಗಿನಿ
ಡಿ) ಮುದ್ರಾರಾಕ್ಷಸ

1. 1-ಬಿ, 2-ಡಿ, 3-ಎ. 4-ಸಿ
2. 1-ಬಿ, 2-ಎ, 3-ಡಿ, 4-ಸಿ✔️
3. 1-ಡಿ, 2-ಬಿ, 3-ಸಿ, 4-ಎ
4. 1-ಎ, 2-ಸಿ, 3-ಬಿ, 4-ಡಿ



9) ಈಜಿಪ್ಟಿನ ಭಾಷೆಯಲ್ಲಿ 'ಫರೋ' ಎಂದರೆ
1. ದೊಡ್ಡ ಮನೆಯಲ್ಲಿ ವಾಸಿಸುವ ವ್ಯಕ್ತಿ ' ✔️
2. ಸಣ್ಣ ಮನೆಯಲ್ಲಿ ವಾಸಿಸುವ ದೊಡ್ಡ ವ್ಯಕ್ತಿ
3. ಅರಮನೆಯಲ್ಲಿ ವಾಸಿಸುತ್ತಿದ್ದ ರಾಜ
4. ಪಿರಮಿಡ್‌ಗಳನ್ನು ನಿರ್ಮಿಸಿದ ರಾಜ



10) ಅಮೆರಿಕದಲ್ಲಿ ಕಂಡುಬರುವ ಪ್ರಾಚೀನ ನಾಗರಿಕತೆಗಳು
1.ಈಜಿಪ್ಟ್, ಇಂಕಾ, ಬೈಬಿಲೋನಿಯಾ
2.ಹರಪ್ಪ, ಈಜಿಪ್ಟ್, ಚೀನಾ
3.ಮಾಯಾ, ಅಜ್ಟೆಕ್, ಇಂಕಾ ✔️
4. ಮೆಸೊಪಟ್ಯಾಮಿಯಾ, ಹರಪ್ಪ, ಈಜಿಪ್ಟ್



11) ಚಂದ್ರಗುಪ್ತ ಮೌರ್ಯ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದರೆ, ಪುಶ್ಯಭೂತಿಯು ಸ್ಥಾಪಿಸಿದ್ದು,
1.ಗಂಗರ ಸಾಮ್ರಾಜ್ಯ
2. ಕುಶಾನರ ಸಾಮ್ರಾಜ್ಯದ
3.ಗುಪ್ತ ಸಾಮ್ರಾಜ್ಯ
4.ವರ್ಧನ ಸಾಮ್ರಾಜ್ಯ ✔️



12) 'ತ್ರಿಶಮುದ್ರತೋಯಪಿತವಾಹನ' ಎಂಬ ಬಿರುದನ್ನು ಪಡೆದ ಶಾತವಾಹನರ ದೊರೆ,
1.ಯಜ್ಞಶ್ರೀ ಶಾತಕರ್ಣಿ
2.ಗೌತಮಿ ಪುತ್ರ ಶಾತಕರ್ಣಿ ✔️
3. ಸಿಮುಖ
4.ದಡಿಗ



13) ಈ ಕೆಳಗಿನ ಘಟನೆಗಳು ಸಂಭವಿಸಿದ ಕ್ರಮ
ಎ) ಹರ್ಷವರ್ಧನನು ತನ್ನ ಸಹೋದರಿ ರಾಜ್ಯಶ್ರೀ ಕನೌಜ್ ನ ರಾಜನಿಗೆ ಕೊಟ್ಟು  ಮದುವೆ ಮಾಡಿದನು
ಬಿ) ಇಮ್ಮಡಿ ಪುಲಕೇಶಿಯ ವಿರುದ್ಧ ಹರ್ಷವರ್ಧನನ ಪರಾಭವಗೊಂಡನು
ಸಿ) ಹರ್ಷವರ್ಧನ ಥಾನೇಶ್ವರದ ಅಧಿಪತಿಯಾದನು
d) ಬಂಗಾಳದ ರಾಜ ಶಶಂಕನು ಕನೌಜ್ ರಾಜನನ್ನು ಕೊಂದನು
1.a b c d
2.b c d a
3.c a d b ✔️
4.d c b a



14) ಚರಕ ಸಂಹಿತೆಯನ್ನು ಚರಕ ಬರೆದಿದ್ದರೆ, ಪಂಚಸಿದ್ಧಾಂತಿಕಾ ರಚಿಸಿದವನು
L ಧನ್ವಂತರಿ2.ಸುಶ್ರುತ
3.ಆರ್ಯಭಟ4.ವರಾಹಮಿಹಿರಾ ✔️



15) ಹರಪ್ಪನ ನಾಗರೀಕತೆಗೆ ಸೇರಿದ ಪ್ರಾಚ್ಯವಸ್ತುಗಳ ಗುಂಪನ್ನು ಗುರುತಿಸಿ
1. ಕಂಚಿನ ನರ್ತಕಿ ಪ್ರತಿಮೆ, ಮನುಷ್ಯನ ಮುಂಡದ ಪ್ರತಿಮೆ, ಸ್ನಾನದ ತೊಟ್ಟಿ ✔️
2.ಪಿರಮಿಡ್, ಜಿಗ್ಗುರಟ್, ನಳಂದ
3. ಗ್ರೇಟ್ ವಾಲ್ ಆಫ್ ಚೀನಾ, ವೃತ್ತಾಕಾರದ ಬೃಹತ್‌ ರಂಗಮಂದಿರ, ಪಿರಮಿಡ್
4. ಕಂಚಿನ ನರ್ತಕಿ ಪ್ರತಿಮೆ, ಮನುಷ್ಯನ ಮುಂಡದ ಪ್ರತಿಮೆ, ಜಿಗ್ಗುರಟ್




16) ಈ ಕೆಳಗಿನ ಹೇಳಿಕೆಗಳನ್ನು ಓದಿ ಮತ್ತು ಸರಿಯಾದ ಪರ್ಯಾಯವನ್ನು ಆರಿಸಿ
ಉ.  ಜೂಲಿಯಸ್ ಸೀಸರ್ ನು  ರೋಮ್‌ನ ರಾಜನಾದ ನಂತರ ತನ್ನನ್ನು ʼಡಿಕ್ಟೇಟರ್‌ʼ ಎಂದು ಘೋಷಿಸಿಕೊಂಡ
ಬಿ. ರೋಮ್ ನಲ್ಲಿ ಗಣರಾಜ್ಯ ವ್ಯವಸ್ಥೆಯು ಶಿಥಿಲಗೊಂಡಿತು
1.ಎ ಮತ್ತು ಬಿ ತಪ್ಪು
2.ಎ ತಪ್ಪು ಮತ್ತು ಬಿ ನಿಜ
3.ಎ ಮತ್ತು ಬಿ ಎರಡು ಸರಿಯಾಗಿವೆ ಮತ್ತು ಎ ಯು ಬಿ ಗೆ ಸರಿಯಾದ ಕಾರಣವಾಗಿದೆ ✔️
4.ಎ ಮತ್ತು ಬಿ ಎರಡೂ ಸರಿಯಾಗಿವೆ ಆದರೆ ಬಿ ಗೆ ಎ ಯು ಸರಿಯಾದ ಕಾರಣವಲ್ಲ



17) ಈ ಚಿತ್ರದಲ್ಲಿರುವ ಸ್ಮಾರಕವನ್ನು ಗುರುತಿಸಿ



















1.ಪಿರಮಿಡ್
2.ಜಿಗ್ಗುರಟ್ ✔️
3.ಎಂಪಿತೀಯೇಟರ್
4.ಕಲೋಸ್ಸಿಯಂ

18) ಸಮುದ್ರಗುಪ್ತನ ಕಾಲದ  ಚಿನ್ನದ ನಾಣ್ಯಗಳಲ್ಲಿ ವೀಣೆಯನ್ನು ನುಡಿಸುತ್ತಿರುವ ಚಿತ್ರವಿದೆ/ ಇದರಿಂದ ತಿಳಿದು ಬರುವ ಅಂಶವೆಂದರೆ,
1. ಆ ಕಾಲದ ವ್ಯಾಪಾರ ಪದ್ಧತಿ
2. ಇವನ ಕಾಲದ  ಶ್ರೀಮಂತಿಕೆ
3. ಅವನ ಅವಧಿಯಲ್ಲಿ ಚಿನ್ನದ ಉತ್ಪಾದನೆ
4. ಇವನಿಗೆ ಸಂಗೀತದ ಬಗ್ಗೆ ಇದ್ದ ಪ್ರೀತಿ ✔️


19) ಗುಪ್ತಾ ಅವಧಿಯಲ್ಲಿ ಭಾರತೀಯರು ಉತ್ತಮ ಗುಣಮಟ್ಟದ ಕಬ್ಬಿಣ ಉತ್ಪಾದಿಸುವ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದರು. ಇದಕ್ಕೆ ಅತ್ಯುತ್ತಮ ಉದಾಹರಣೆ
1. ಚಿತ್ತೋರ್‌ನ ವಿಜಯ ಸ್ಥಂಭ
2. ವೈಶಾಲಿಯ ಅಶೋಕ ಸ್ತಂಭ
3. ಮೆಹ್ರೌಲಿ ಕಬ್ಬಿಣದ ಸ್ಥಂಭ ✔️
4. ಭೋಪಾಲ್‌ನ ಹೆಲಿಯೊಡೋರಸ್ ಸ್ಥಂಭ


20) ವರ್ಧಮಾನ ಮಹಾವೀರನು ತಮ್ಮ 30 ನೇ ವಯಸ್ಸಿನಲ್ಲಿ ತಮ್ಮ ಕುಟುಂಬ ಮತ್ತು ಮನೆಯನ್ನು ತ್ಯಜಿಸಲು ಕಾರಣ
1. ಸತ್ಯದ ಅನ್ವೇಷಣೆ ✔️
2. ಸಂಸಾರದಲ್ಲಿ ಜಿಗುಪ್ಸೆ
3. ದೇಶ ಸಂಚಾರ
4. ಧರ್ಮ ಪ್ರಚಾರ



21) ಗುಪ್ತಾ ಇತಿಹಾಸದ ಬಗ್ಗೆ ತಿಳಿಯಲು ಈ ಕೆಳಗಿನ ಮೂಲಗಳು ಉಪಯುಕ್ತವಾಗಿವೆ
ಎ. ಅಲಹಾಬಾದ್‌ನ ಸ್ಥಂಭ ಶಾಸನ.
ಬೌ. ಮೆಹ್ರೌಲಿಯ ಸ್ತಂಭ ಶಾಸನ.
ಸಿ. ವಿಶಾಖದತ್ತನ ಮುದ್ರಾ ರಾಕ್ಷಸ ಮತ್ತು ದೇವಿ ಚಂದ್ರಗುಪ್ತ
ಡಿ. ದೀಪವಂಶ ಮತ್ತು ಮಹಾವಂಶ
1. ಎ, ಬಿ, ಸಿ, ಡಿ
2. ಎ, ಬಿ, ಸಿ ✔️
3. ಎ, ಬಿ
4. ಎ ಮಾತ್ರ


22) ವರ್ಧಮಾನ ಮಹಾವೀರ ಬೋಧಿಸಿದ ತ್ರಿರತ್ನಗಳು
1. ಅಹಿಂಸೆ, ಸತ್ಯ ಮತ್ತು ಅಸ್ತೇಯ
2. ಅಸ್ತೇಯ, ಅಪರಿಗ್ರಹ ಮತ್ತು ಬ್ರಹ್ಮಚರ್ಯ
3. ಸಮ್ಯಕ್ ಜ್ಞಾನ , ಸಮ್ಯಕ್ ದರ್ಶನ ಮತ್ತು ಅಸ್ತೇಯ
4. ಸಮ್ಯಕ್ ಜ್ಞಾನ, ಸಮ್ಯಕ್ ದರ್ಶನ ಮತ್ತು ಸಮ್ಯ‌ಕ್ ಚರಿತ್ರ ✔️



23) ಬುದ್ಧನ ಜೀವನ‌ದಲ್ಲಿ ʼಧರ್ಮ ಚಕ್ರ ಪ್ರವರ್ತನ' ಎಂದರೆ
1. ಅವನ ಮೊದಲ ಬೋಧನೆ ✔️
2. ಅವನು ಇಹಲೋಕವನ್ನು ತ್ಯಜಿಸಿದ್ದು
3. ಎಂಟು ಅಷ್ಟಾಂಗೀಯ ಮಾರ್ಗವನ್ನು  ಬೋಧಿಸಿದ್ದು
4. ಅವನು ಮಧ್ಯಮ ಪಂಥವನ್ನ ಬೋಧಿಸಿದ್ದು


24) ಈ ದೇವಾಲಯವನ್ನು ಗುರುತಿಸಿ



1. ಬೃಹದೀಶ್ವರ ದೇವಸ್ಥಾನ, ತಂಜಾವೂರು ✔️
2. ಕಾಶೀವಿಶ್ವೇಶ್ವರ ದೇವಾಲಯ, ಲಕ್ಕುಂಡಿ
3. ಕೈಲಾಸ ದೇವಸ್ಥಾನ, ಎಲ್ಲೋರಾ
4. ವಿರುಪಠಕ್ಷ ದೇವಾಲಯ, ಪಟ್ಟದಕಲ್ಲು


25) 'ಮೆಸೊಪಟ್ಯಾಮಿಯಾ' ಎಂದರೆ
1. ನಾಡುಗಳ ನಡುವೆ ನದಿ
2. ಪರ್ವತಗಳ ನಡುವಿನ ನಾಡು
3. ನದಿಗಳ ನಡುವೆ ನಾಡು ✔️
4. ಬೆಟ್ಟಗಳ ನಡುವೆ ನಾಡು



26) ಕರ್ನೂಲ್ ಗುಹೆಗಳಲ್ಲಿ ಕಂಡು ಬರುವ ಚಿತಾಭಸ್ಮದ ಚಿಹ್ನೆಗಳು ಸೂಚಿಸುವುದು,
1. ಇತಿಹಾಸಪೂರ್ವ ಅವಧಿಯಲ್ಲಿ ಶವಸಂಸ್ಕಾರದ ಪದ್ಧತಿ
2. ಐತಿಹಾಸಿಕ ಪೂರ್ವದಲ್ಲಿ ಬೆಂಕಿಯಿಂದ ಉಂಟಾದ ಅನಾಹುತ
3. ಇತಿಹಾಸಪೂರ್ವ ಅವಧಿಯಲ್ಲಿ ಅಡುಗೆ ಮಾಡುವ ವಿಧಾನ
4. ಪೂರ್ವ-ಐತಿಹಾಸಿಕ ಜನರು ಹೊಂದಿದ್ದ ಬೆಂಕಿಯ ಜ್ಞಾನ ✔️



27) ಕುಶಾನರಿಗೆ ಸಂಬಂಧಿಸಿದ ಸರಿಯಾದ ಹೇಳಿಕೆಯನ್ನು ಗುರುತಿಸಿ
1. ಅವರು ಮಧ್ಯ ಏಷ್ಯಾದಿಂದ ಭಾರತಕ್ಕೆ ವಲಸೆ ಬಂದವರು ✔️
2. ಈ ರಾಜವಂಶದ ಸ್ಥಾಪಕ ಕನಿಷ್ಕಾ
3. ಪಾಟಾಲಿಪುತ್ರ ಕುಶಾನರ ರಾಜಧಾನಿಯಾಗಿತ್ತು
4. ಕುಶಾಣರು ಮುಖ್ಯವಾಗಿ ಬೆಳ್ಳಿ ನಾಣ್ಯಗಳನ್ನು ಮುದ್ರಿಸಿದರು



28) ಗಂಗಾ ಆಳ್ವಿಕೆಯಲ್ಲಿ ನಿರ್ಮಿಸಲಾದ ದೇವಾಲಯಗಳನ್ನು ಗುರುತಿಸಿ
1. ಪಟ್ಟದಕಲ್ಲಿನ ವಿರುಪಾಕ್ಷ ದೇವಾಲಯ, ತಲಕಾಡಿನ ಪಾತಾಳೇಶ್ಚರ
2. ಮಹಾಬಲಿಪುರದ ಪಂಚರಥಗಳು, ತಲಕಾಡದಲ್ಲಿರುವ ಪಾತಾಳೇಶ್ವರ ದೇವಸ್ಥಾನ
3.ಎಲ್ಲೋರದ ಕೈಲಾಸ ದೇವಾಲಯ, ಮಣ್ಣೆಯಲ್ಲಿರುವ ಕಪಿಲೇಶ್ವರ ದೇವಾಲಯ
4. ಮಣ್ಣೆಯಲ್ಲಿರುವ ಕಪಿಲೇಶ್ವರ ದೇವಸ್ಥಾನ, ತಲಕಾಡದಲ್ಲಿರುವ ಪಾತಾಳೇಶ್ವರ ದೇವಸ್ಥಾನ ✔️



29) ಕೆಳಗಿನ ಹೇಳಿಕೆಗಳನ್ನು ಓದಿ ಮತ್ತು ಸರಿಯಾದ ಪರ್ಯಾಯವನ್ನು ಆರಿಸಿ
ಎ. 'ಮಾನಸೊಲ್ಲಾಸ' ಗ್ರಂಥವನ್ನು ರಾಜ ಮೂರನೇ ಸೋಮೇಶ್ವರ ಬರೆದನು
ಬಿ. 'ಮಾನಸೊಲ್ಲಾಸʼ ಗ್ರಂಥವನ್ನು ಸಂಸ್ಕೃತದ ವಿಶ್ವಕೋಶವೆಂದು ಪರಿಗಣಿಸಲಾಗಿದೆ.
1. ಎ ಮತ್ತು ಬಿ ಎರಡೂ ನಿಜ ✔️
2.ಎ ತಪ್ಪು  ಮತ್ತು ಬಿ ನಿಜ
3. ಎ ಮತ್ತು ಬಿ ಎರಡೂ ತಪ್ಪು
4. .ಎ ನಿಜ ಮತ್ತು ಬಿ ತಪ್ಪು



30) ಎಲ್ಲೋರಾದ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದವರು
1. ಪಲ್ಲವರು
2. ಚಾಲುಕ್ಯರು
3. ರಾಷ್ಟ್ರಕೂಟರು ✔️
4.ಕದಂಬರು



31) ಚೋಳರ ಆಡಳಿತದ ಪ್ರಮುಖ ಲಕ್ಷಣವೆಂದರೆ
1. ಗ್ರಾಮದ ಸ್ವಯಂಮಾಧಿಪತ್ಯದ ಬೆಳವಣಿಗೆ ✔️
2. ತಾಲ್ಲೂಕಿನ ಸ್ವಯಮಾಧಿಪತ್ಯದ ಬೆಳವಣಿಗೆ
3. ರಾಜನ ಸರ್ವಾಧಿಕಾರದ ಬೆಳವಣಿಗೆ
4. ಗಣರಾಜ್ಯ ವ್ಯವಸ್ಥೆಯ ಬೆಳವಣಿಗೆ



32) ಕೆಳಗಿನವುಗಳನ್ನು ಹೊಂದಿಸಿ
1. ಪುಷ್ಯಭೂತಿ
2. ಸಿಮುಖ
3. ಮಯೂರ ವರ್ಮ 
4. ರಾಜ ಜಯಸಿಂಹ

ಎ. ಬಾದಾಮಿ ಚಾಲುಕ್ಯರ ವಂಶದ ಸ್ಥಾಪಕ
ಬಿ. ಕದಂಬ ವಂಶದ ಸ್ಥಾಪಕ
ಸಿ. ಶಾತವಾಹನ ವಂಶದ ಸ್ಥಾಪಕ
ಡಿ. ವರ್ಧನ ವಂಶದ ಸ್ಥಾಪಕ



1. 1-ಬಿ, 2-ಡಿ, 3-ಎ, 4-ಸಿ
2. 1-ಬಿ, 2-ಎ, 3-ಡಿ, 4-ಸಿ
3. 1-ಡಿ, 2-ಸಿ, 3-ಬಿ, 4-ಎ ✔️
4. 1-ಎ, 2-ಸಿ, 3-ಬಿ, 4-ಡಿ



33) ಕೆಳಗಿನ ಸಾಮ್ರಾಜ್ಯಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿದಾಗ ಸರಿಹೊಂದುವ ಸೂಚಿ
a. ಕಲ್ಯಾಣದ ಚಾಲುಕ್ಯರು
b. ಚೋಳರು
c. ದ್ವಾರಸಮುದ್ರದ ಹೊಯ್ಸಳರು
d. ಕಂಚಿಯ ಪಲ್ಲವರು
1. a b c d
2. d c d a
3. d b a c ✔️
4. d c a b



34) ಹೊಂದಿಸಿ ಬರೆಯಿರಿ
1. ಬಾದಾಮಿ ಚಾಲುಕ್ಯರು
2. ಗಂಗರು
3. ಕದಂಬರು
4. ಶಾತವಾಹನರು

ಎ) ಸಾ.ಶ 540-ಸಾ.ಶ 753
ಬಿ) ಸಾ.ಶ 350-ಸಾ.ಶ 1004
ಸಿ) ಸಾ.ಶ 325-ಸಾ.ಶ 540
ಡಿ) ಸಾ.ಶ 230-ಸಾ.ಶ 220

1. 1-ಬಿ 2-ಡಿ 3-ಎ 4-ಸಿ
2. 1-ಬಿ 2-ಎ 3-ಡಿ 4-ಸಿ
3. 1-ಡಿ 2-ಸಿ 3-ಬಿ 4-ಎ
4. 1-ಎ 2-ಬಿ 3-ಸಿ 4-ಡಿ ✔️



35) ಈ ನಕ್ಷೆಯಲ್ಲಿ ತೋರಿಸಿರುವ ರಾಜ ಮನೆತನವನ್ನು ಗುರುತಿಸಿ.




1. ಪಲ್ಲವರು
2. ಚಾಲುಕ್ಯರು
3. ರಾಷ್ಟ್ರಕೂಟರು ✔️
4. ಕದಂಬರು



36) ಈ ಚಿತ್ರದಲ್ಲಿರುವವರನ್ನು ಗುರುತಿಸಿ



1. ಶಂಕರಾಚಾರ್ಯರು
2. ರಾಮಾನುಜಾಚಾರ್ಯರು ✔️
3. ಬಸವೇಶ್ವರರು
4. ಮದ್ವಾಚಾರ್ಯರು



37. ಕರ್ನಾಟಕದಲ್ಲಿ  ಸ್ಥಾಪನೆಯಾದ ಕನ್ನಡ ಮೂಲದ ಮೊದಲ ರಾಜವಂಶ
1. ಚೋಳರು
2. ಗಂಗರು
3. ಶಾತವಾಹನರು
4. ಕದಂಬರು ✔️




38) ಬಾದಾಮಿಯ  ಕಪ್ಪೆ ಅರಭಟ್ಟನ ಶಾಸನದ ಮಹತ್ವ
1.ಒಂದು ಪದ್ಯವು ತ್ರಿಪದಿ ಶೈಲಿಯಲ್ಲಿರುವುದು ಕಂಡು ಬರುತ್ತದೆ ✔️
2. ಒಂದು ಪದ್ಯವು ದ್ವಿಪದಿ ಶೈಲಿಯಲ್ಲಿರುವುದು ಕಂಡು ಬರುತ್ತದೆ.
3. ಒಂದು ಪದ್ಯವು ಚೌಪದಿ ಶೈಲಿಯಲ್ಲಿರುವುದು ಕಂಡು ಬರುತ್ತದೆ.
4. ಒಂದು ಪದ್ಯವು  ಷಟ್ಪದಿ ಶೈಲಿಯಲ್ಲಿರುವುದು ಕಂಡು ಬರುತ್ತದೆ.



39) ಒಬ್ಬರಿಂದ ಒಬ್ಬರಿಗೆ ಬಾಯಿಮಾತಿನ ಮೀಲಕ ಹರಿದು ಬಂದಿರುವ ಕಥೆ, ಲಾವಣಿ, ಐತಿಹ್ಯ, ಜಾನಪದ ಗೀತೆಗಳನ್ನು ಹೀಗೆ ಕರೆಯುವರು
1. ಲಿಖಿತ ಸಾಹಿತ್ಯ
2. ಶಾಸನಗಳು
3. ಮೌಖಿಕ ಸಾಹಿತ್ಯ ✔️
4. ಸ್ಮಾರಕಗಳು



40) ವಾಸ್ತುಶಿಲ್ಪಕ್ಕೆ ಗಂಗರು ನೀಡಿದ ಮಹತ್ವದ ಕೊಡುಗೆಯೆಂದರೆ
1. ಸ್ತೂಪ ಮತ್ತು ಬಸದಿಗಳು
2. ಸ್ತೂಪ ಮತ್ತು ಮಾನಸ್ತಂಭಗಳು
3. ಬಸದಿ ಮತ್ತು ಬ್ರಹ್ಮ ಮಾನಸ್ಥಂಬಗಳು
4. ಎತ್ತರದ ಮಾನಸ್ತಂಭ ಮತ್ತು ಬ್ರಹ್ಮ ಮನಸ್ಥಂಬಗಳು ✔️




41) ಈ ಕೆಳಗಿನವುಗಳ ಸರಿಯಾದ ಹೊಂದಾಣಿಕೆ
1. ಅಜಂತ ಮತ್ತು ಅಮರಾವತಿ ಚಿತ್ರಕಲೆಗಳು
2. ಬನವಾಸಿಯ ದೇವಾಲಯ
3. ಬಾದಾಮಿ, ಐಹೊಳೆ, ಪಟ್ಟದ ಕಲ್ಲುಗಳ ದೇವಾಲಯ
4. ಎಲ್ಲೋರಾ ಮತ್ತು ಎಲಿಫೆಂಟಗಳ  ದೇವಾಲಯ

ಎ.ಕದಂಬರು
ಬಿ. ಶಾತವಾಹನರು
ಸಿ. ರಾಷ್ಟ್ರಕೂಟರು
ಡಿ. ಚಾಲುಕ್ಯರು

1) 1-ಎ, 2-ಬಿ, 3-ಸಿ, 4-ಡಿ
2) 1-ಬಿ, 2-ಸಿ, 3-ಡಿ, 4-ಎ
3) 1-ಸಿ, 2-ಬಿ, 3-ಡಿ, 4-ಎ
4) 1-ಬಿ, 2-ಎ, 3-ಡಿ, 4-ಸಿ ✔️


42) ಈ ನಕ್ಷೆಯಲ್ಲಿ ಸರಿಯಾಗಿ ಪಟ್ಟಿ ಮಾಡಲಾದ ಸ್ಥಳಗಳು





1) ಎ-ಮುಂಬೈ ಬಿ-ಪಾಂಡಿಚೆರಿ ಸಿ-ಕೋಲ್ಕತ್ತಾ ✔️
2) ಎ-ಪಾಂಡಿಚೆರಿ ಬಿ-ಮುಂಬೈ ಸಿ-ಕೋಲ್ಕತ್ತಾ
3) ಎ-ಕೋಲ್ಕತ್ತಾ ಬಿ-ಪಾಂಡಿಚೆರಿ ಸಿ-ಮುಂಬೈ
4) ಎ-ಮುಂಬೈ ಬಿ-ಪಾಂಡಿಚೆರಿ ಸಿ-ಚೆನ್ನೈ


43) ಸುಮಾರು 12,000 ವರ್ಷಗಳ ಹಿಂದಿನಿಂದ ಹಿಡಿದು 10,000 ವರ್ಷಗಳ ಅವಧಿಯನ್ನು ಸೂಕ್ಷ್ಮ ಶಿಲಾಯುಗವೆಂದು  ಕರೆಯಲು ಕಾರಣ
1. ಈ ಅವಧಿಯ ಶಿಲಾಯುಧಗಳು ಸಾಮಾನ್ಯವಾಗಿ ಬಹಳ ಚಿಕ್ಕದಾಗಿದ್ದವು ✔️
2. ಶಿಲೆಗಳಲ್ಲಿ ಸೂಕ್ಷ್ಮ ಕೆತ್ತನೆ ಮಾಡುತ್ತಿದ್ದರು
3. ಸಣ್ಣ ಶಿಲೆಗಳ ಬಳಕೆಯನ್ನು ತಿಳಿದಿದ್ದರು
4. ಶಿಲಾಯುಧಗಳು ಹರಿತವಾಗಿದ್ದವು



44) ಈ ಕೆಳಗಿನವುಗಳ ಸರಿಯಾದ ಹೊಂದಾಣಿಕೆ
1. ಕ್ಷೇತ್ರಸ್ಯ-ಪತಿ   . ಹಾಡುಗಾರ
2. ದೇವಿ ಸೀತಾ ಬಿ. ಮನೆಯ ಕಿರುದೇವತೆ
3. ವಸ್ಟೋಶ್-ಪತಿ ಸಿ. ನೇಗಿಲಿನ ದೇವಿ
4. ಉದ್ದಗತ್ರಿ ಡಿ. ಉಳುಮೆ ಮಾಡಿದ ಕಿರುದೇವತೆ

1) 1-ಎ 2-ಬಿ 3-ಸಿ 4-ಡಿ
2) 1-ಡಿ 2-ಸಿ 3-ಬಿ 4-ಎ ✔️
3) 1-ಸಿ 2-ಬಿ 3-ಡಿ 4-ಎ
4) 1-ಬಿ 2-ಎ 3-ಡಿ 4-ಸಿ



45) ಋಗ್ವೇದ ಅವಧಿಯಲ್ಲಿ 'ಹೋತೃ' ಎಂದರೆ
1. ಯುದ್ಧ ಮಾಡುವ ರಾಜ
2. ಸಹಾಯ ಮಾಡುವ ಮಂತ್ರಿ
3. ಯಜ್ಞವನ್ನು ನಡೆಸಿಕೊಡುವ ಪುರೋಹಿತ ✔️
4. ನೃತ್ಯ ಮಾಡುವ ರಾಣಿ



46) ಉತ್ತರ ವೇದಗಳಕಾಲದ ಕೃಷಿಗೆ ಹೆಚ್ಚಾಗಿ ಎತ್ತುಗಳನ್ನು ಬಳಸುತ್ತಿದ್ದರು ಎನ್ನು ಉಲ್ಲೇಖ ಇಲ್ಲಿ ಕಂಡು ಬರುತ್ತದೆ.
l. ಯಜುರ್ವೇದ ಸಂಹಿತೆ ✔️
2. ig ಗ್ವೇದ ಸಂಹಿತೆ
3. ಸಾಮವೇದ ಸಂಹಿತೆ
4. ಅಥರ್ವಣ ಸಂಹಿತೆ



47) ಹ್ವಾಂಗ್ ಹೋ ನದಿಯನ್ನು 'ಚೀನಾದ ದುಗುಡ' ಎಂದು ಕರೆಯಲು ಕಾರಣ
1. ಪದೇ ಪದೇ ಬತ್ತಿ ಹೋಗುವ ಕಾರಣ
2. ಇದು ಆಗಾಗ್ಗೆ ಪ್ರವಾಹವನ್ನು ಉಂಟು ಮಾಡುತ್ತಿದ್ದರಿಂದ ✔️
3. ಇದು ಆಗಾಗ್ಗೆ ಕಲುಷಿತಗೊಳ್ಳುತ್ತದ್ದ ಕಾರಣ
4. ಪ್ರಾಣಿಗಳನ್ನು ನುಂಗಿ ಹಾಕಿದ್ದರಿಂದ



48) ಕಿನ್ ಶಿಹುವಾಂಗ್ಟಿ ುತ್ತರದ ಭಾಗಧಿಂದ ಆಕ್ರಮಣ ,ಮಾಡುತ್ತಿದ್ದ ದಾಳೀಕೋರರ ದೌರ್ಜನ್ಯವನ್ನು ಹತ್ತಿಕ್ಕಲು ಕೈಗೊಂಡ ಮಹತ್ವದ ಕ್ರಮ
1. ಸೈನಿಕ ವ್ಯವಸ್ಥೆಯನ್ನು ರೂಪಿಸಿದನು
2. ಪತ್ತೇದಾರಿ ವ್ಯವಸ್ಥೆಯನ್ನು ರಚಿಸಿದನು
3. ಗಾಳಿಗೋಪುರವನ್ನು ನಿರ್ಮಿಸಿದನು
4. ಮಹಾಗೋಡೆಯನ್ನು ಕಟ್ಟಿದನು ✔️



49) ಕಳಿಂಗ ಯುದ್ಧದ ನಂತರ ಅಶೋಕನು ಇನ್ನು ಮುಂದೆ ಯುದ್ಧ ಮಾಡದಿರಲು ನಿರ್ಧರಿಸಿದನು, ಏಕೆಂದರೆ
1. ಯುದ್ಧದ ಸಾವುಗಳು ಮತ್ತು ನೋವಿನಿಂದ ಅವನ ಮನ ಕಲುಕಿತು ✔️
2. ಯುದ್ಧದಿಂದಾಗಿ ಅವರು ತೀವ್ರ ನಷ್ಟವನ್ನು ಎದುರಿಸಬೇಕಾಯಿತು
3. ಯುದ್ಧದ ಸಮಯದಲ್ಲಿ ಅವನ ಸೈನಿಕರು ಅವನನ್ನು ಮೋಸಗೊಳಿಸಿದರು
4. ಯುದ್ಧದಲ್ಲಿ ಅವನು ಸೋತು ಹೋದನು



50) ಕೆಳಗಿನ ಹೇಳಿಕೆಗಳನ್ನು ಓದಿ ಮತ್ತು ಸರಿಯಾದ ಪರ್ಯಾಯವನ್ನು ಆರಿಸಿ
ಎ. ಐಹೋಳೆಯು ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು ಎನಿಸಿದೆ
ಬಿ. ದೇವಾಲಯಗಳ ವಾಸ್ತುಶಿಲ್ಪದ ವಿಕಾಸವನ್ನು ಮೊದಲು ಐಹೋಳೆಯಲ್ಲಿ ನಡೆಸಲಾಯಿತು
1. ಎ ಮತ್ತು ಬಿ ಎರಡೂ ತಪ್ಪು
2. ಎ ತಪ್ಪು ಮತ್ತು ಬಿ ನಿಜ ಮತ್ತು ಬಿ ಯು ಎ ಗೆ ಸರಿಯಾದ ಕಾರಣವಲ್ಲ
3. ಎ ಮತ್ತು ಬಿ ಎರಡೂ ನಿಜ ಮತ್ತು ಬಿ ಯು ಎ  ಗೆ ಸರಿಯಾದ ಕಾರಣವಾಗಿದೆ ✔️
4. ಎ ನಿಜ ಮತ್ತು ಬಿ ತಪ್ಪು ಮತ್ತು ಬಿ ಯು ಎ ಗೆ ಸರಿಯಾದ ಕಾರಣವಲ್ಲ








ರಾಜಕೀಯ ವಿಜ್ಞಾನ, ಸಾಮಾಜಿಕ ಮತ್ತು ವ್ಯಾಪಾರ ಅಧ್ಯಯನಗಳು


1) ಮಾನವ ಹಕ್ಕುಗಳ ರಕ್ಷಣೆಯ ಸಂಸ್ಥೆಗಳು ರಚನೆಯಾದ ಸರಿಯಾದ ಕಾಲಾನುಕ್ರಮವನ್ನು ಆರಿಸಿ
ಎ) ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
ಬಿ) ರಾಷ್ಟ್ರೀಯ ಅಲ್ಪಸಂಖ್ಯಾತರ  ಆಯೋಗ
ಸಿ) ರಾಷ್ಟ್ರೀಯ ಪರಿಶಿಷ್ಟ ಜಾತಿ  ಆಯೋಗ
ಡಿ) ರಾಷ್ಟ್ರೀಯ ಮಹಿಳಾ ಆಯೋಗ
1) ಎ ಬಿ ಸಿ ಡಿ
2) ಎ ಸಿ ಬಿ ಡಿ
3) ಡಿ ಸಿ ಬಿ ಎ
4) ಡಿ ಬಿ ಎ ಸಿ ✔️



2) ಸಚಿವಾಲಯವನ್ನು 'ಸರ್ಕಾರದ ನರಮಂಡಲ' ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಅದು
ಎ. ಆಡಳಿತದ ನಿಯಮಗಳನ್ನು ರೂಪಿಸುತ್ತದೆ
ಬಿ. ಸರ್ಕಾರದ ನೀತಿಗಳನ್ನು ರೂಪಿಸುತ್ತದೆ
ಸಿ. ಶಾಸಕಾಂಗದಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ
ಡಿ. ಬಜೆಟ್ ಸಿದ್ಧಪಡಿಸುತ್ತದೆ

l) ಎ, ಬಿ ಮತ್ತು ಸಿ ನಿಜ, ಡಿ ತಪ್ಪು
2) ಎ, ಸಿ ಮತ್ತು ಡಿ ನಿಜ, ಬಿ ತಪ್ಪು
3) ಎ, ಬಿ ಮತ್ತು ಡಿ ನಿಜ, ಸಿ ತಪ್ಪು ✔️
4) ಬಿ, ಸಿ ಮತ್ತು ಡಿ ನಿಜ, ಎ ತಪ್ಪು



3) ಭಾರತೀಯ ಸಂವಿಧಾನದ 356 ನೇ ವಿಧಿಯನ್ನು ಜಾರಿಗೊಳಿಸುವ ಸಂದರ್ಭ
l) ರಾಜ್ಯದಲ್ಲಿ ನೈಸರ್ಗಿಕ ವಿಪತ್ತು ಸಂಭವಿಸಿದಾಗ
2) ಒಂದು ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳು ಸಂಭವಿಇಸದಾಗ
3) ಸರ್ಕಾರ ಬದಲಾದಾಗ
4) ರಾಜ್ಯದಲ್ಲಿ ಸಂವಿಧಾನಾತ್ಮಕ ಆಡಳಿತ ವಿಫಲವಾದಾಗ ✔️



4) ಐ ಎ ಎ ಎಸ್‌ ನ ವಿಸ್ತರಿತ ರೂಪ
l) ಭಾರತೀಯ ಆಡಳಿತ ಮತ್ತು ಲೆಕ್ಕಪರಿಶೋಧಕ ಸೇವೆ
2) ಭಾರತೀಯ ಲೆಕ್ಕ ಮತ್ತು ಪರಿಶೋಧನಾ ಸೇವೆ ✔️
3) ಭಾರತೀಯ ಲೆಕ್ಕ ಮತ್ತು ಆಡಳಿತ ಸೇವೆ
4) ಭಾರತೀಯ ಲೆಕ್ಕ ಮತ್ತು ಸಲಹಾ ಸೇವೆ



5) ಕರ್ತವ್ಯದಲ್ಲಿರುವಾಗ ನೌಕರ ಪಡೆಯುವ ತರಬೇತಿ
1) ಅನೌಪಚಾರಿಕ ತರಬೇತಿ ✔️
2) ಔಪಚಾರಿಕ ತರಬೇತಿ
3) ಹಿನ್ನೆಲೆ ತರಬೇತಿ
4) ಪರಿಣಿತ ತರಬೇತಿ


6) ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುವವರು
1) ಮುಖ್ಯ ನ್ಯಾಯಾಧೀಶರು
2) ರಾಷ್ಟ್ರಪತಿಗಳು ✔️
3) ಪ್ರಧಾನಮಂತ್ರಿ
4) ಕೇಂದ್ರ ಗೃಹಮಂತ್ರಿ



7) ನಗರ ಪ್ರದೇಶದ ಅತ್ಯಂತ ಚಿಕ್ಕ ಚಿಕ್ಕ ಚುನಾವಣಾ ವಿಭಾಗವನ್ನು ಹೀಗೆಂದು ಕರೆಯಲಾಗುತ್ತದೆ
1) ವಿಭಾಗಗಳು
2) ಕ್ಷೇತ್ರಗಳು
3) ಮತಗಟ್ಟೆಗಳು
4) ವಾರ್ಡ್‌ಗಳು ✔️



8) ಕೆಳಗಿನವುಗಳನ್ನು ಹೊಂದಿಸಿ ಮತ್ತು ಸರಿಯಾಗಿ ಹೊಂದಿಕೆಯಾದ ಗುಂಪನ್ನು ಆರಿಸಿ
1) ಗ್ರಾಮ ಪಂಚಾಯಿತಿ
2) ಜಿಲ್ಲಾ ಪಂಚಾಯತ್
3) ನಗರ ಪುರಸಭೆ 
4)  ಮಹಾ ನಗರ ಪಾಲಿಕೆ  

ಎ. ಆಯುಕ್ತರು
ಬಿ. ಮುಖ್ಯ ಅಧಿಕಾರಿ ಬಿ
ಸಿ. ಪಂಚಾಯತ್ ಅಭಿವೃದ್ಧಿ ಅಧಿಕಾರಿ 
ಡಿ. ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ 

1) 1-ಎ 2-ಬಿ 3-ಸಿ 4-ಡಿ
2) 1-ಬಿ 2-ಸಿ 3-ಡಿ 4-ಎ
3) 1-ಸಿ 2-ಡಿ 3-ಬಿ 4-ಎ✔️
4) 1-ಡಿ 2-ಎ 3-ಬಿ 4-ಸಿ



9) ಇಂಗ್ಲೆಂಡ್‌ನಲ್ಲಿ 1688 ರಲ್ಲಿ  'ರಕ್ತರಹಿತ ಕ್ರಾಂತಿಯ' ಪರಿಣಾಮ
1) ಸ್ವಾತಂತ್ರ್ಯದ ಘೋಷಿಸಲಾಯಿತು
2) ರಾಜನ ಅಧಿಕಾರ  ಕಡಿಮೆಯಾಯಿತು
3) ಬಿಲ್‌ ಆಪ್‌ ರೈಟ್ಸ್ ಜಾರಿ ಗೊಳಿಸಲಾಯಿತು ✔️
4) ಗಣರಾಜ್ಯದ  ಸ್ಥಾಪನೆಯಾಯಿತು



10) ಹೇಳಿಕೆ 1: ಆಧುನಿಕ ರಾಜ್ಯವು  'ಆಡಳಿತಾತ್ಮಕ ರಾಜ್ಯ' ಎಂದು ಕರೆಯಲಾಗುತ್ತದೆ
ಹೇಳಿಕೆ 2: ಮಾನವ ಸಮಾಜದ ಸಮಗ್ರ ಅಭಿವೃದ್ಧಿಗೆ ಸಾರ್ವಜನಿಕ ಆಡಳಿತ ಅತ್ಯಗತ್ಯ.
1) ಎರಡೂ ಹೇಳಿಕೆಗಳು ಸರಿಯಾಗಿವೆ ಮತ್ತು ಹೇಳಿಕೆ 2, 1ನೇ  ಹೇಳಿಕೆಯನ್ನು ಬೆಂಬಲಿಸುತ್ತದೆ.✔️
2) ಎರಡೂ ಹೇಳಿಕೆಗಳು ತಪ್ಪು.
3) ಎರಡೂ ಹೇಳಿಕೆಗಳು ಸರಿಯಾಗಿವೆ ಆದರೆ ಹೇಳಿಕೆ -2, ಹೇಳಿಕೆ 1 ಅನ್ನು ಬೆಂಬಲಿಸುವುದಿಲ್ಲ.
4) ಎರಡೂ ಹೇಳಿಕೆಗಳು ಸರಿಯಾಗಿವೆ ಆದರೆ ಅವು ಪರಸ್ಪರ ಸಂಬಂಧ ಹೊಂದಿಲ್ಲ


11) ಇಂಗ್ಲೆಂಡ್ ರಾಜನಿಂದ 'ಮ್ಯಾಗ್ನಾ ಕಾರ್ಟಾ' ಸಹಿ ಮಾಡಿದ ಪರಿಣಾಮ. 
1) ಜನರು ಖಾಸಗಿ ಮತ್ತು ಪೂರ್ವಜರ ಆಸ್ತಿಯನ್ನು ಹೊಂದುವ ಹಕ್ಕುಗಳನ್ನು ಪಡೆದರು. ✔️
2) ಚರ್ಚ್ ಸರ್ಕಾರಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಪ್ರಾರಂಭಿಸಿತು. 
3) ಪ್ರಜೆಗಳು ತಮ್ಮ ಹಕ್ಕುಗಳನ್ನು ಕಳೆದುಕೊಂಡರು 
4) ಕೆಲವು ಪ್ರಾಚೀನ ಸಂಪ್ರದಾಯಗಳನ್ನು ಜಾರಿಗೊಳಿಸಲಾಯಿತು



12) ಪಿಫ್ನರ್ ಪ್ರಕಾರ, ಸಾರ್ವಜನಿಕ ಆಡಳಿತ ಎಂದರೆ
1) ಕಾನೂನಿನ ಸಮಗ್ರ ಮತ್ತು ಕ್ರಮಬದ್ಧ ಅನುಷ್ಠಾನಗೊಳಿಸುವಿಕೆ
2) ಸಾರ್ವಜನಿಕ ನೀತಿಗಳನ್ನು ಅನುಷ್ಠಾನಗೊಳಿಸುವಲ್ಲಿ ಸಮುದಾಯ ಉಪಕ್ರಮಗಳ ಬಲವರ್ಧನೆ ✔️
3) ಸರ್ಕಾರದ ಕಾರ್ಯನಿರ್ವಹಿಸುವ ಕಾರ್ಯಾಂಗ ಶಾಖೆ
4) ರಾಜ್ಯದ ದಿನನಿತ್ಯದ ಕಾರ್ಯನಿರ್ವಹಣೆಯನ್ನು ನಡೆಸುವ ಸರ್ಕಾರದ ಅಂಗ



13) ಗ್ರೀಕ್ ಪದ 'ಪೋಲಿಸ್'ನ ಪದದ ಅರ್ಥ
1) ರಾಜ್ಯ
2) ಜನತೆ
3) ನಗರ-ರಾಜ್ಯ ✔️
4) ದೇಶ



14) ಸಾರ್ವಜನಿಕ ಆಡಳಿತದ ಪಿತಾಮಹ
1) ವುಡ್ರೊ ವಿಲ್ಸನ್ ✔️
2) ಫಿಫ್‌ನರ್
3) ಲೂಥರ್ ಗುಲಿಕ್
4) ಅಲೆಕ್ಸಾಂಡರ್ ಹ್ಯಾಮಿಲ್ಟನ್



15) 'ದಿ ಪಾಲಿಟಿಕ್ಸ್' ಬರೆದವರು
1) ಪ್ಲೇಟೋ 
2) ಅರಿಸ್ಟಾಟಲ್ ✔️
3) ಸಾಕ್ರಟೀಸ್
4) ಕೌಟಿಲ್ಯ



16) ರಾಜಕೀಯ ವಿಜ್ಞಾನದ ಮಹತ್ವವನ್ನು ತೋರಿಸುವ ಸರಿಯಾದ ಹೇಳಿಕೆಗಳನ್ನು ಆರಿಸಿ
ಎ) ಸರ್ಕಾರದ ರಚನೆ ಮತ್ತು ಕಾರ್ಯಗಳನ್ನು ತಿಳಿಸುತ್ತದೆ
ಬಿ) ರಾಜಕೀಯ ವಿಜ್ಞಾನವು ಸ್ವತಂತ್ರ ವಿಜ್ಞಾನವಾಗಿದೆ
ಸಿ) ಅಂತರರಾಷ್ಟ್ರೀಯ ಶಾಂತಿ ಮತ್ತು ಸಹಕಾರದ ಮಹತ್ವವನ್ನು ವಿವರಿಸುತ್ತದೆ
d) ಸಾಮಾಜಿಕ ವರ್ತನೆಯನ್ನು ವಿವರಿಸುತ್ತದೆ

1) ಎ ಮತ್ತು ಬಿ ಮಾತ್ರ
2) ಎ ಮತ್ತು ಡಿ ಮಾತ್ರ
3) ಎ ಮತ್ತು ಡಿ ಮಾತ್ರ ✔️
4) ಬಿ ಮತ್ತು ಡಿ ಮಾತ್ರ



17) ಈ ಕೆಳಗಿನ ಸಾಂವಿಧಾನಿಕ ತಿದ್ದುಪಡಿಯಿಂದ ಆಸ್ತಿ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ.
1) 41 ನೇ ತಿದ್ದುಪಡಿ
2) 42 ನೇ ತಿದ್ದುಪಡಿ
3) 43 ನೇ ತಿದ್ದುಪಡಿ
4) 44 ನೇ ತಿದ್ದುಪಡಿ ✔️



18) ಮೂಲಭೂತ ಹಕ್ಕುಗಳು ಮತ್ತು ಮಾನವ ಹಕ್ಕುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿ
1) ಮಾನವ ಹಕ್ಕುಗಳು ಸಂಕುಚಿತವಾಗಿವೆ. ಮೂಲಭೂತ ಹಕ್ಕುಗಳು ವಿಶಾಲವಾಗಿವೆ.
2) ಮಾನವ ಹಕ್ಕುಗಳನ್ನು ಕಾನೂನಿನಿಂದ ರಕ್ಷಿಸಲಾಗಿದೆ. ಮೂಲಭೂತ ಹಕ್ಕುಗಳನ್ನು  ರಕ್ಷಿಸಲಾಗಿಲ್ಲ.
3) ಮಾನವ ಹಕ್ಕುಗಳನ್ನು ಕಾನೂನಿನಿಂದ ರಕ್ಷಿಸಲಾಗುವುದಿಲ್ಲ. ಮೂಲಭೂತ ಹಕ್ಕುಗಳನ್ನು ಕಾನೂನಿನಿಂದ ರಕ್ಷಿಸಲಾಗಿದೆ ✔️
4) ಮಾನವ ಹಕ್ಕುಗಳು ಮಾನವ ಅಭಿವೃದ್ಧಿಗೆ ಪೂರಕವಾಗಿವೆ. ಮೂಲಭೂತ ಹಕ್ಕುಗಳು ಮಾನವ ಅಭಿವೃದ್ಧಿಗೆ ಪೂರಕವಾಗಿಲ್ಲ.




19) ಕರ್ನಾಟಕ ಲೋಕ ಸೇವಾ ಆಯೋಗವು ಸ್ಥಾಪಿತಗೊಂಡ ವರ್ಷ
1) 1950
2) 1951 ✔️
3) 1952
4) 1953



20) ಕೇಂದ್ರ ಲೋಕ ಸೇವಾ ಆಯೋಗದ ಸದಸ್ಯರ ಅಧಿಕಾರಾವಧಿ
1) 6 ವರ್ಷಗಳು ಅಥವಾ 65 ವರ್ಷಗಳ ವರೆಗೆ ✔️
2) 5 ವರ್ಷಗಳು ಅಥವಾ 60 ವರ್ಷ ವಯಸ್ಸು ವರೆಗೆ
3) 6 ವರ್ಷಗಳು ಅಥವಾ 60 ವರ್ಷಗಳು ವರೆಗೆ
4) 5 ವರ್ಷಗಳು ಅಥವಾ 65 ವರ್ಷಗಳು ವರೆಗೆ



21) ಸ್ಥಳೀಯ ಸರ್ಕಾರ ರಚನೆಯ ಮುಖ್ಯ ಉದ್ದೇಶ
1) ಅಧಿಕಾರ ವಿಕೇಂದ್ರೀಕರಣ  ✔️
2) ಅಧಿಕಾರ ಕೇಂದ್ರೀಕರಣ
3) ರಾಜ್ಯಗಳಿಗೆ ಹೆಚ್ಚಿನ ಅಧಿಕಾರ
4) ಅಧಿಕ ತೆರಿಗೆ ಸಂಗ್ರಹ



22) ಈ ಕೆಳಗಿನವುಗಳಲ್ಲಿ ಯಾವುದು ಸ್ಥಳೀಯ ಸರ್ಕಾರಕ್ಕೆ ಆದಾಯದ ಮೂಲವಲ್ಲ
1) ರಾಜ್ಯ ಸರ್ಕಾರದ ಹಣಕಾಸು ಅನುದಾನ
2) ಕೇಂದ್ರ ಸರ್ಕಾರದ ಹಣಕಾಸು ಅನುದಾನ ✔️
3) ಆಸ್ತಿಗಳಿಂದ ಬಾಡಿಗೆ ಮೊತ್ತ
4) ಮಾರುಕಟ್ಟೆ ತೆರಿಗೆ



23) 73 ಮತ್ತು 74 ನೇ ಸಾಂವಿಧಾನಿಕ ತಿದ್ದುಪಡಿಯ ಕಾಯಿದೆಯ ಮಹತ್ವ
1) ರಾಜ್ಯ ನೀತಿ ನಿರ್ದೇಶನ ತತ್ವಗಳನ್ನು ಜಾರಿಗೊಳಿಸಲಾಯಿತು
2) ಸ್ಥಳೀಯ ಸರ್ಕಾರಕ್ಕೆ ಸಾಂವಿಧಾನಿಕ ಸ್ಥಾನಮಾನವನ್ನು ನೀಡಲಾಯಿತು✔️
3) ಪಂಚಾಯತ್ ರಾಜ್ ವ್ಯವಸ್ಥೆಯನ್ನು ಪರಿಚಯಿಸಲಾಯಿತು
4) ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ದೊರಕಿತು



24) ಮಹಾಪೌರರ ಅಧಿಕಾರದ ಅವಧಿ
1) 5 ವರ್ಷಗಳು
2) 6 ವರ್ಷಗಳು
3) 2 ವರ್ಷಗಳು
4) l ವರ್ಷ ✔️


25) ನೀಡಿರುವ ಖಾಲಿ ವಲಯದಲ್ಲಿ ತುಂಬುವ ಸೂಕ್ತವಾದ ಮೂಲಭೂತ ಹಕ್ಕನ್ನು ಆರಿಸಿ





1) ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು
2) ಸಾಂವಿಧಾನಿಕ ಪರಿಹಾರದ ಹಕ್ಕು ✔️
3) ಆಸ್ತಿಯ ಹಕ್ಕು
4) ಮತದಾನದ ಹಕ್ಕು



26) ಶಿಕ್ಷಣವನ್ನು ಸಂವಿಧಾನದಲ್ಲಿ ಮೂಲಭೂತ ಹಕ್ಕು ಮಾಡಲಾಗಿದೆ
1) 82 ನೇ ತಿದ್ದುಪಡಿ
2) 84 ನೇ ತಿದ್ದುಪಡಿ
3) 86 ನೇ ತಿದ್ದುಪಡಿ ✔️
4) 88 ನೇ ತಿದ್ದುಪಡಿ



27) ಲಾರ್ಡ್ ರಿಪ್ಪನ್ ಅವರನ್ನು 'ಸ್ಥಳೀಯ ಸರ್ಕಾರಗಳ ಪಿತಾಮಹ' ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಅವರು
1) ಸ್ಥಳೀಯ ಸರ್ಕಾರಗಳ ಅಭಿವೃದ್ಧಿಗೆ ಶ್ರಮಿಸಿದರು
2) ಸ್ಥಳೀಯ ಸರ್ಕಾರದ ಮಹತ್ವ ತಿಳಿಸಿದರು
3) ಸ್ಥಳೀಯ ಸರ್ಕಾರದ ಆಡಳಿತಕ್ಕೆ ಸಾಂವಿಧಾನಿಕ ಸ್ಥಾನಮಾನವನ್ನು ನೀಡಿದರು
4) ಸ್ಥಳೀಯ ಸರ್ಕಾರದ ಗೊತ್ತುವಳಿ ರಚಿಸುವ ಮೂಲಕ ಸ್ಥಳೀಯ ಸರ್ಕಾರದ ರಚನೆಗೆ ಅವಕಾಶ ನೀಡಿದರು ✔️



28) ಗ್ರಾಮ ಪಂಚಾಯತ್ ರಚನೆಗೆ ಅಗತ್ಯವಾದ ಜನಸಂಖ್ಯೆ
1) 5000 ರಿಂದ 7000 ✔️
2) 5000 ರಿಂದ 10000
3) 3000 ರಿಂದ 7000
4) 7000 ರಿಂದ 10000


29) ವಾಣಿಜ್ಯವು ನೇರವಾಗಿ ಸರ್ಕಾರಕ್ಕೆ ಸಹಾಯ ಮಾಡುತ್ತದೆ ಹೇಗೆಂದರೆ
1) ಸರಕುಗಳ ಉತ್ಪಾದನೆಯ ಮೂಲಕ
2) ಗ್ರಾಹಕರ ಮೇಲೆ ನಿರ್ಬಂಧ ಹೇರುವುದು
3) ಕರ, ತೆರಿಗೆಗಳು ಮತ್ತುಸುಂಕಗಳ ರೂಪದ ಆದಾಯದ ಮೂಲಕ ✔️
4) ಆರ್ಥಿಕ ಚಟುವಟಿಕೆಗಳ ಅಧ್ಯಯನದ ಮೂಲಕ



30) ವೃತ್ತಿಗೆ ಉತ್ತಮ ಉದಾಹರಣೆ
1) ಕೃಷಿ ಕಾರ್ಮಿಕರು
2) ರೈತರು
3) ವ್ಯಾಪಾರಿಗಳು
4) ವಕೀಲರು ✔️



31) ಈ ಕೆಳಗಿನವುಗಳಲ್ಲಿ ಯಾವುದು ವ್ಯಾಪಾರ ಸುಗಮವಾಗಿ ನಡೆಯಲು ಪೂರಕವಲ್ಲದ ಅಂಶ
1) ಬ್ಯಾಂಕಿಂಗ್
2) ವಿಮೆ
3) ಉಗ್ರಾಣ ಸೌಲಭ್ಯ
4) ತೆರಿಗೆ ✔️



32)ವಸ್ತು ವಿನಿಮಯ ಪದ್ಧತಿಯಲ್ಲಿದ್ದ ಸಮಸ್ಯೆಗಳ ಸರಿಯಾದ ಪರ್ಯಾಯವನ್ನು ಆರಿಸಿ
ಎ) ಬಯಕೆಗಳ ಮರು ಹೊಂದಾಣಿಕಯ ಸಮಸ್ಯೆ
ಬಿ) ಕೆಲವು ಸರಕುಗಳ ವಿಭಜನೆಯ ಸಮಸ್ಯೆ
ಸಿ) ಸರಕುಗಳ ಸುಲಭ ಸಾಗಣೆ
ಡಿ) ಹಣದ ಬಳಕೆಯ ಪದ್ಧತಿ ಆರಂಭ
1) ಎ, ಬಿ ಸರಿಯಾದ ಸಿ, ಡಿ ತಪ್ಪು ✔️
2) ಸಿ, ಡಿ ಸರಿ ಎ, ಬಿ ತಪ್ಪು
3) ಬಿ, ಸಿ ಸರಿ ಎ, ಡಿ ತಪ್ಪು
4) ಎ, ಡಿ ಸರಿ ಬಿ, ಸಿ ತಪ್ಪು




33) ಹೇಳಿಕೆ 1 : ಬ್ರಿಟನ್ನರ ಕೈಗಾರಿಕಾ ಕ್ರಾಂತಿಯು ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಪ್ರಮುಖ ಬದಲಾವಣೆಗಳಿಗೆ ಕಾರಣವಾಯಿತು
ಹೇಳಿಕೆ 2: ದೊಡ್ಡ ಪ್ರಮಾಣದ ಉತ್ಪಾದನೆಯು ಹೆಚ್ಚಾದ್ದರಿಂದ  ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ತೆರೆಯಲು ಕಾರಣವಾಯಿತು
1) ಎರಡೂ ಹೇಳಿಕೆಗಳು ಸರಿಯಾಗಿವೆ ಮತ್ತು ಹೇಳಿಕೆ 1, ಹೇಳಿಕೆ 2 ಅನ್ನು ಬೆಂಬಲಿಸುತ್ತದೆ ✔️
2) ಎರಡೂ ಹೇಳಿಕೆಗಳು ತಪ್ಪು
3) ಎರಡೂ ಹೇಳಿಕೆಗಳು ಸರಿಯಾಗಿವೆ ಆದರೆ ಹೇಳಿಕೆ 1,  ಹೇಳಿಕೆ 2 ಅನ್ನು ಬೆಂಬಲಿಸುವುದಿಲ್ಲ
4) ಎರಡೂ ಹೇಳಿಕೆಗಳು ಸರಿಯಾಗಿವೆ ಆದರೆ ಅವು ಪರಸ್ಪರ ಸಂಬಂಧ ಹೊಂದಿಲ್ಲ



34) ಕೆಳಗಿನವುಗಳನ್ನು ಹೊಂದಿಸಿ ಮತ್ತು ಸರಿಯಾದ ಉತ್ತರವನ್ನು ಆರಿಸಿ
l) ಪ್ರಾಥಮಿಕ ಉದ್ಯಮ
2) ನಿರ್ಮಾಣ ಉದ್ಯಮ
3) ಗುಡಿ ಕೈಗಾರಿಕೆ ✔️
4) ಸಣ್ಣ ಪ್ರಮಾಣದ ಕೈಗಾರಿಕೆ


ಎ) ಚಾಪೆ ಹೆಣೆಯುವುದು
ಬಿ) ಪಾದರಕ್ಷೆಗಳ ತಯಾರಿಕೆ
ಸಿ) ಹೈನುಗಾರಿಕೆ
ಡಿ) ರಸ್ತೆಗಳ ನಿರ್ಮಾಣ

1) 1-ಎ 2-ಸಿ 3-ಬಿ 4-ಡಿ
2) 1-ಬಿ 2-ಡಿ 3-ಸಿ 4-ಎ
3) 1-ಸಿ 2-ಡಿ 3-ಎ 4-ಬಿ
4) 1-ಡಿ 2-ಎ 3-ಡಿ 4-ಸಿ ✔️



35) ಪುನರ್‌ ರಪ್ತು ವ್ಯಾಪಾರಕ್ಕೆ ಉತ್ತಮ ಉದಾಹರಣೆಯಾದ ದೇಶ
1) ಇಂಗ್ಲೆಂಡ್
2) ಅಮೆರಿಕಾ
3) ಹಾಲೆಂಡ್
4) ಸಿಂಗಾಪುರ್  ✔️




36) ಗ್ರಾಹಕರ ಮನೆಯ ಹತ್ತಿರ ಕೆಲವು ವಸ್ತುಗಳನ್ನು ತಲುಪಿಸುವ ವ್ಯಾಪಾರಿಗಳು
1) ತಳ್ಳುಗಾಡಿ ವ್ಯಾಪಾರಿಗಳು ✔️
2) ಸಗಟು ವ್ಯಾಪಾರಿಗಳು
3) ರಸ್ತೆಬದಿ ವ್ಯಾಪಾರಿಗಳು
4) ಸಂತೆ ವ್ಯಾಪಾರಿಗಳು



37) ಕ್ರಿಯಾಶೀಲ ವ್ಯಾಪಾರಿಗಳು ಎಂದರೆ,
1) ಬಂಡವಾಳವನ್ನು ಹೂಡಿಕೆ ಮಾಡಿ ಮತ್ತು ದಿನನಿತ್ಯದ ವ್ಯವಹಾರದಲ್ಲಿ ಭಾಗವಹಿಸುವುದಿಲ್ಲಾ
2) ಬಂಡವಾಳವನ್ನು ಹೂಡಿಕೆ ಮಾಡಿ, ದಿನನಿತ್ಯದ ವ್ಯವಹಾರದಲ್ಲಿ ಭಾಗವಹಿಸುತ್ತಾರೆ ✔️
3) ಬಂಡವಾಳವನ್ನು ಹೂಡಿಕೆ ಮಾಡುವುದಿಲ್ಲ , ದಿನನಿತ್ಯದ ವ್ಯವಹಾರದಲ್ಲಿ ಭಾಗವಹಿಸುವುದಿಲ್ಲ
4) 18 ವರ್ಷಕ್ಕಿಂತ ಕಡಿಮೆ ವಯಸ್ಸಿಗಿಂತ ಕಡಿಮೆ ಇದ್ದು  ಲಾಭವನ್ನು ಹಂಚಿಕೊಳ್ಳುತ್ತಾರೆ



38) ಏಕವ್ಯಕ್ತಿ ಮಾಲೀಕತ್ವ ವ್ಯವಹಾರ ಸಂಸ್ಥೆಯ ಅನುಕೂಲತೆ
1) ಸೀಮಿತ ಆಡಳಿತ ಕೌಶಲ್ಯಗಳು
2) ಸ್ವಂತ ಬಂಡವಾಳದಿಂದ ಪ್ರಾರಂಭ ✔️
3) ಒಬ್ಬ ವ್ಯಕ್ತಿಯ ಮೇಲೆ ಜವಾಬ್ದಾರಿಯ ಹೊರೆ
4) ಸಂಸ್ಥೆಯನ್ನು ದೊಡ್ಡದಾಗಿ ಬೆಳೆಸಲು ಕಷ್ಟ



39) ಈ ಕೆಳಗಿನವುಗಳಲ್ಲಿ ಖಾಸಗಿ ವಲಯದ ಸಂಸ್ಥೆಗಳನ್ನು ಗುರುತಿಸಿ
ಎ) ಏಕವ್ಯಕ್ತಿ ಮಾಲೀಕತ್ವ 
ಬಿ) ಸಹಕಾರಿ ಸಂಘಗಳು
ಸಿ) ಹಿಂದೂ ಅವಿಭಕ್ತ ಕುಟುಂಬ ಸಂಸ್ಥೆ
ಡಿ) ಕೂಡು ಬಂಡವಾಳ ಸಂಸ್ತೆ
1) ಎ ಮತ್ತು ಸಿ ಮಾತ್ರ ✔️
2) ಬಿ ಮತ್ತು ಸಿ ಮಾತ್ರ
3) ಬಿ ಮತ್ತು ಡಿ ಮಾತ್ರ
4) ಎ ಮತ್ತು ಡಿ ಮಾತ್ರ



40) ಲಾಭ ಗಳಿಸಲು ವ್ಯವಹಾರದಲ್ಲಿ ಸಮಾಜಘಾತುಕ ವ್ಯವಹಾರ
1) ಸರಕುಗಳ ಮಾರಾಟ
2) ಸರಕುಗಳ ಕಲಬೆರಕೆ ✔️
3) ಸರಕುಗಳ ವಿನಿಮಯ
4) ಸರಕುಗಳ ವಿತರಣೆ



41) ಕಾಗದದ ಹಣವನ್ನು ಮುದ್ರಿಸುವ ಜವಾಬ್ದಾರಿ ಈ ಬ್ಯಾಂಕಿನದು
1) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ✔️
2) ಕೇಂದ್ರ ಸಹಕಾರಿ ಬ್ಯಾಂಕ್
3) ರಾಷ್ಟ್ರೀಕೃತ ಬ್ಯಾಂಕುಗಳು
4) ನಬಾರ್ಡ್




42) ಕೆಳಗಿನವುಗಳನ್ನು ಹೊಂದಿಸಿ ಮತ್ತು ಸರಿಯಾದ ಉತ್ತರವನ್ನು ಆರಿಸಿ
l) ಕಾರ್ಲ್ ಮಾರ್ಕ್ಸ್
2) ಎಮಿಲೆ ಡರ್ಖೆಮ್
3) ಆಗಸ್ಟ್ ಕಾಮ್ಟೆ 
4) ಮ್ಯಾಕ್ಸ್ವೆಬರ್

ಎ) ಎಕೋನಮಿ ಅಂಡ್‌ ದ ಸೊಸೈಟಿ
ಬಿ) ಪಾಸಿಟಿವ್‌ ಫಿಲಾಸಫಿ
ಸಿ) ದಾಸ್‌ ಕ್ಯಾಪಿಟಲ್
ಡಿ) ದಿ ಡಿವಿಜನ್‌ ಆಫ ಲೇಬರ್‌ ಇನ ಸೊಸೈಟಿ

1) 1-ಬಿ, 2-ಎ, 3-ಡಿ, 4-ಸಿ
2) 1-ಡಿ, 2-ಬಿ, 3-ಸಿ, 4-ಎ
3) 1-ಸಿ, 2-ಡಿ, 3-ಬಿ, 4-ಎ ✔️
4) 1-ಎ, 2-ಸಿ, 3-ಎ, 4-ಡಿ



43) ಎಮಿಲೆ ಡರ್ಖೀಮ್  ರವರು ಸಮಾಜಶಾಸ್ತ್ರವನ್ನು ಹೀಗೆ ವ್ಯಾಖ್ಯಾನಿಸಿದ್ದಾರೆ
1) ಸಾಮಾಜಿಕ ಸಂಸ್ಥೆಗಳ ವಿಜ್ಞಾನ ✔️
2) ಸಾಮಾಜಿಕ ವರ್ತನೆಯ ಅಧ್ಯಯನ
3) ನಿಯಮಗಳಿಗೆ ಒಳಪಟ್ಟ  ವಿಜ್ಞಾನ
4) ಸಮಾಜದ ಅಧ್ಯಯನ



44) ಸಮಾಜದಲ್ಲಿರುವ ಶೋಷಣೆ, ತಾರತಮ್ಯ, ದೌರ್ಜನ್ಯಗಳನ್ನು ಶಿಕ್ಷಣದ ಮೂಲಕ ಸರಿಪಡಿಸುವ ಭರವಸೆಯನ್ನು ಸಾಧಿಸಿ ತೋರಿಸಿದವರು,
1) ಎ.ಆರ್.ದೇಸಾಯಿ
2) ಜಿ.ಎಸ್. ಘ್ರುಯೆ
3) ಎಂ.ಎನ್.ಶ್ರೀನಿವಾಸ್
4) ಡಾ. ಬಿ.ಆರ್‌.ಅಂಬೇಡ್ಕರ್ ✔️


45) ವಿಚಾರಗಳು, ನಂಬಿಕೆಗಳು, ಮೌಲ್ಯಗಳು ಈ ಗುಂಪಿಗೆ ಸೇರಿವೆ
1) ಭೌತಿಕ ಸಂಸ್ಕೃತಿ
2) ಭೌತಿಕವಲ್ಲದ ಸಂಸ್ಕೃತಿ ✔️
3) ನೈಸರ್ಗಿಕ ಸಂಸ್ಕೃತಿ
4) ಧಾರ್ಮಿಕ ಸಂಸ್ಕೃತಿ 



46) ಸಂಸ್ಕೃತಿಯ ಮಹತ್ವವನ್ನು ಸೂಚಿಸುವ ಸರಿಯಾದ ಹೇಳಿಕೆಗಳು
ಎ) ಸಂಸ್ಕೃತಿಯು ಸಾಮಾಜಿಕ ಜ್ಞಾನವನ್ನು ಒದಗಿಸುತ್ತದೆ
ಬಿ) ಸಮಾಜದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತದೆ
ಸಿ) ಸಂಸ್ಕೃತಿಯು ಮೌಲ್ಯಗಳನ್ನು ವಿವರಿಸುತ್ತದೆ
ಡಿ) ಸಮಾಜದಲ್ಲಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುತ್ತದೆ
1) ಎ ಮತ್ತು ಸಿ ಮಾತ್ರ  ✔️
2) ಎ ಮತ್ತು ಡಿ ಮಾತ್ರ
3) ಬಿ ಮತ್ತು ಸಿ ಮಾತ್ರ
4) ಸಿ ಮತ್ತು ಡಿ ಮಾತ್ರ



47) ಹೇಳಿಕೆ ಎ: ಕುಟುಂಬವು ಮಕ್ಕಳ ಪಾಲನೆಯನ್ನು ಪೋಷಿಸುತ್ತದೆ ಮತ್ತು ಶಾಲೆಯು ಮಕ್ಕಳಿಗೆ ಜ್ಞಾನವನ್ನು ನೀಡುತ್ತದೆ
ಹೇಳಿಕೆ ಬಿ : ಸಾಮಾಜಿಕ ಸಂಸ್ಥೆಗಳು ಪರಸ್ಪರ ಸಹ ಸಂಬಂಧ ಹೊಂದಿವೆ
1) ಎ ಮತ್ತು ಬಿ ಎರಡೂ ಸರಿಯಾಗಿವೆ, ಹೇಳಿಕೆ ಎ ಹೇಳಿಕೆ ಬಿ ಯನ್ನು ಬೆಂಬಲಿಸುತ್ತದೆ ✔️
2) ಎ ಮತ್ತು ಬಿ ಎರಡೂತಪ್ಪು
3) ಎ ಸರಿಯಾಗಿದೆ ಬಿ ತಪ್ಪು, ಹೇಳಿಕೆ ಎ ಹೇಳಿಕೆ ಬಿ ಯನ್ನು ಬೆಂಬಲಿಸುವುದಿಲ್ಲ 
4) ಬಿ ಸರಿಯಾಗಿದೆ ಎ ತಪ್ಪು



48) ಸಮಾಜ ವಿಕಾಸದದ ವಿವಿಧ ಪ್ರಕಾರಗಳ ಸ ರಿಯಾದ ಕ್ರಮ
1) ಬೇಟೆಯಾಡುವುದು ಮತ್ತು ಆಹಾರ ಸಂಗ್ರಹಣಾ ಸಮಾಜ, ಪಶುಪಾಲನಾ ಸಮಾಜ, ಕೃಷಿ ಸಮಾಜ, ನಗರ ಸಮಾಜ ✔️
2) ನಗರ ಸಮಾಜ, ಕೃಷಿ ಸಮಾಜ,ಪಶುಪಾಲನಾ ಸಮಾಜ, ಬೇಟೆಯಾಡುವುದು ಮತ್ತು ಆಹಾರ ಸಂಗ್ರಹಣಾ ಸಮಾಜ.
3) ಪಶುಪಾಲನಾ ಸಮಾಜ, ಕೃಷಿ ಸಮಾಜ, ಬೇಟೆ ಮತ್ತು ಆಹಾರ ಸಂಗ್ರಹಣಾ ಸಮಾಜ, ನಗರ ಸಮಾಜ.
4) ಬೇಟೆಯಾಡುವುದು ಮತ್ತು ಆಹಾರ ಸಂಗ್ರಹಣಾ ಸಮಾಜ, ಗ್ರಾಮೀಣ ಸಮಾಜ, ನಗರ ಸಮಾಜ, ಕೃಷಿ ಸಮಾಜ.



49) ಭಾರತದ ಮಹಿಳಾ ಸಮಾಜಶಾಸ್ತ್ರಜ್ಞ ಶ್ರೀಮತಿ. ಸಿ.ಪಾರ್ವತಮ್ಮನವರು
1) ಮಹಾರಾಷ್ಟ್ರದವರು
2)ಕೇರಳದವರು
3) ಕರ್ನಾಟಕದವರು ✔️
4) ತಮಿಳುನಾಡಿನವರು


50) ಜಮೀನ್ದಾರಿ ಪದ್ಧತಿಯು ಇವರ ಕಾಲದಲ್ಲಿ ಉಗಮವಾಯಿತು.
l) ಮೊಘಲರು
2) ಬಹಮನಿ ಸುಲ್ತಾನರು
3) ದೆಹಲಿ ಸುಲ್ತಾನರು  ✔️
4) ರಾಜಪೂತರು






ಭೂಗೋಳ ವಿಜ್ಞಾನ ಮತ್ತು ಅರ್ಥಶಾಸ್ತ್ರ

1) ಗ್ರೀನ್ವಿಚ್ ಸಮಯಕ್ಕಿಂತ ಭಾರತೀಯ ಆದರ್ಶವೇಳೆಯು ಎಷ್ಟು ಘಂಟೆ ಮುಂದಿದೆ
1) 4 ಗಂಟೆ
2) 4 ಗಂಟೆ 30 ನಿಮಿಷಗಳು
3) 5 ಗಂಟೆ 30 ನಿಮಿಷಗಳು  ✔️
4) 5 ಗಂಟೆ



2) ವಿಶ್ವದ ಅತಿದೊಡ್ಡ ಮತ್ತು ಆಳವಾದ ಸಾಗರ
1) ಪೆಸಿಫಿಕ್ ಸಾಗರ✔️
2) ಆರ್ಕ್ಟಿಕ್ ಸಾಗರ
3) ಅಟ್ಲಾಂಟಿಕ್ ಸಾಗರ
3) ಹಿಂದೂ ಮಹಾ ಸಾಗರ


3) ಭೂಮಿಯ ಮೇಲಿನ ಅತ್ಯಂತ ದೊಡ್ಡ ಖಂಡ
l) ಯುರೋಪ್
2) ಆಫ್ರಿಕಾ
3) ಏಷ್ಯಾ✔️
4) ಆಸ್ಟ್ರೇಲಿಯಾ



4) 66 1/2 °  ಡಿಗ್ರಿ ಉತ್ತರ ಅಕ್ಷಾಂಶವನ್ನು ಹೀಗೆ ಕರೆಯಲಾಗುತ್ತದೆ
1)ಮಕರ ಸಂಕ್ರಾಂತಿ ವೃತ್ತ
2) ಕರ್ಕಾಟಕ ಸಂಕ್ರಾಂತಿವೃತ್ತ
3) ಅಂಟಾರ್ಕ್ಟಿಕ್ ವೃತ್ತ
4) ಆರ್ಕ್ಟಿಕ್ ವೃತ್ತ ✔️



5) ಭೂಮಿಯನ್ನು 'ಭೂಮ್ಯಾಕಾರ ಅಥವಾ ಗೋಳಾಕಾರʼ ಎಂದು ಕರೆಯಲು ಕಾರಣ
1) ಭೂ ಧ್ರುವಗಳಲ್ಲಿ  ಉಬ್ಬಿದಂತಿದ್ದು, ಸಮಭಾಜಕವೃತ್ತದ ಬಳಿ ಚಪ್ಪಟೆಯಾಗಿದೆ
2) ಭೂ ಧ್ರುವಗಳ ಬಳಿಯು ಮತ್ತು ಸಮಭಾಜಕ ವೃತ್ತದ ಎರಡೂ ಕಡೆ ಉಬ್ಬಿದೆ
3) ಭೂಮಿಯ ಧ್ರುವಗಳಲ್ಲಿ ಚಪ್ಪಟೆಯಾಗಿದ್ದು ಮತ್ತು ಸಮಭಾಜಕ ವೃತ್ತದ ಬಳಿ  ಉಬ್ಬಿದಂತಿದೆ. ✔️
4) ಭೂಮಿಯ ಧ್ರುವಗಳಲ್ಲಿ ಮತ್ತು ಸಮಭಾಜಕದಲ್ಲಿ ಚಪ್ಪಟೆಯಾಗಿದೆ




6) ಈ ಕೆಳಗಿನವುಗಳಲ್ಲಿ ಯಾವುದನ್ನು 'ಭೂಪ್ರಧಾನ ಗೋಳಾರ್ಧ' ಎಂದು ಕರೆಯಲಾಗುತ್ತದೆ
1) ದಕ್ಷಿಣ ಗೋಳಾರ್ಧ
2) ಉತ್ತರ ಗೋಳಾರ್ಧ ✔️
3) ಪೂರ್ವ ಗೋಳಾರ್ಧ
4) ಪಶ್ಚಿಮ ಗೋಳಾರ್ಧ


7) ವಿಶ್ವದ ಅತಿ ಹೆಚ್ಚು ವೇಳಾ ವಲಯಗಳನ್ನು ಹೊಂದಿರುವ ದೇಶ,
l) ಕೆನಡಾ
2) ಅಮೇರಿಕಾ
3) ರಷ್ಯಾ✔️
4) ಆಸ್ಟ್ರೇಲಿಯಾ



8) ಧೃವಗಳ ಕಡೆಗೆ ಹೋದಂತೆ ರೇಖಾಂಶಗಳ ನಡುವಿನ ಅಂತರ ಕಡಿಮೆಯಾಗುತ್ತಾ ಹೋಗುತ್ತದೆ ಇದಕ್ಕೆ ಕಾರಣ
1) ಉತ್ತರದಿಂದ ದಕ್ಷಿಣಕ್ಕೆ ಎಳೆಯಲ್ಪಟ್ಟ ರೇಖಾಂಶಗಳು
2) ರೇಖಾಂಶಗಳು ಧೃವಗಳಲ್ಲಿ ಸಂಧಿಸುತ್ತದೆ ✔️
3) ಭೂಮಿಯು ಗೋಳಾಕಾರದಲ್ಲಿದೆ
4) ರೇಖಾಂಶಗಳನ್ನು ಲಂಬವಾಗಿ ಭೂಮಿಯ ಮೃಲೆ ಎಳೆಯಲಾಗಿದೆ


9) ಭೂಮಿಯ ಅತ್ಯಂತ ಮೇಲ್ಭಾಗದ ಪದರು
l) ಭೂ ಕವಚ ✔️
2) ಮ್ಯಂಟಲ್
3) ಕೇಂದ್ರಗೋಳ
4) ಶಿಲಾಗೋಳ




10) ಅಗ್ನಿಶಿಲೆಗಳಿಗೆ ಗ್ರಾನೈಟ್ ಉದಾಹರಣೆಯಾಗಿದ್ದರೆ, ಸೆಡಿಮೆಂಟರಿ‌ / ಕಣಶಿಲೆಗಳಿಗೆ ಉದಾಹರಣೆ,
l) ಡಯೊರೈಟ್
2) ಬಸಾಲ್ಟ್
3) ಆಂಡಿಸೈಟ್
4) ಜಿಪ್ಸುಂ ✔️



11) "ಎಟ್ನಾ" ಜ್ವಾಲಾಮುಖಿ ಇರುವ ದೇಶ
1) ಯುಎಸ್ಎ (ಅಮೆರಿಕ)
2) ಇಟಲಿ ✔️
3) ಫಿಲಿಪೈನ್ಸ್
4) ತಾಂಜಾನಿಯಾ



12) ಹಿಮದ ರಾಶಿಯು ತನ್ನ ಭಾರ ಹಾಗೂ ಗುರುತ್ವಾಕರ್ಷಣೆಯಿಂದ ನಿಧಾನವಾಗಿ ಜಾರುವುದನ್ನು ಹೀಗೆನ್ನುತ್ತೇವೆ.
I) ಹಿಮಪಾತ
2) ಹಿಮಜಲ ಪ್ರವಾಹ 
3) ಹಿಮನದಿ ✔️
4) ಹಿಮಾಗಾರ



13) ಕೆಳಗಿನವುಗಳನ್ನು ಹೊಂದಿಸಿ ಮತ್ತು ಸರಿಯಾದ ಉತ್ತರಗಳನ್ನು ಆರಿಸಿ.
1) ನದಿಯ ಹರಿಯುವ ಮಾರ್ಗ
2) ನದಿ ಹುಟ್ಟುವ ಸ್ಥಳ
3) ನದಿ ಸಮುದ್ರವನ್ನು ಸಂಧಿಸುವ ಸ್ಥಳ
4) ಒಂದು ನದಿ ಮುಖ್ಯ ನದಿಯನ್ನು ಸೇರುವ ಸ್ಥಳ
ಎ) ನದಿ ಮೂಲ
ಬಿ) ನದಿಯ ಪಾತ್ರ
ಸಿ) ಸಂಗಮ
d) ನದಿಮುಖ

1) 1-ಸಿ, 2-ಬಿ, 3-ಡಿ, 4-ಎ
2) 1-ಬಿ, 2-ಎ, 3-ಡಿ, 4-ಸಿ ✔️
3) 1-ಡಿ, 2-ಸಿ, 3-ಎ, 4-ಬಿ
4) 1-ಎ, 2-ಡಿ, 3-ಸಿ, 4-ಬಿ




14) ಮಾರುತಗಳ ನಗ್ನೀಕರಣ ಕಾರ್ಯದಿಂದ ನಿರ್ಮಿತವಾಗುವ ಭೂ ಸ್ವರೂಪಗಳೆಂದರೆ,
1) ನಾಯಿಕೊಡೆ, ಶಿಲಾಪೀಠಗಳು, ಮರಳು ದಿಬ್ಬಗಳು, ಲೋಯಸ್ ಮೈದಾನ. ✔️
2) 'ವಿ' ಆಕಾರದ ಕಣಿವೆ, ಮೆಕ್ಕಲು ಬೀಸಣಿಕೆ, ಮುಖಜಭೂಮಿ, ಪ್ರವಾಹ ಮೈದಾನ.
3) 'ಯು' ಆಕಾರದ ಕಣಿವೆ, ಗಿರಿಶೃಂಗ, ಶಿಲಾಸೋಪಾನ, ತೂಗು ಕಣಿವೆ.
4) ಲ್ಯಾಪೀಸ್, ನುಂಗು ಬಿಲ, ಅಂತರ್‌ ಗುಹೆ, ಅವರೋಹಿ



15) ಭೂ ಖಂಡಗಳ ಮೇಲ್ಪದರುವಾದ ಭೂ ಕವಚವನ್ನು ʼಸಿಯಾಲ್‌ʼ ಎಂದು ಕರೆಯಲು ಕಾರಣ
1) ದೊಡ್ಡ ಪ್ರಮಾಣದ ಸಿಲಿಕಾ ಮತ್ತು ಅಲ್ಯೂಮಿನಿಯಂ ಹೊಂದಿರುವುದು ✔️
2) ದೊಡ್ಡ ಪ್ರಮಾಣದ ಸಿಲಿಕಾ ಮತ್ತು ಮೆಗ್ನೀಸಿಯಮ್  ಹೊಂದಿರುವುದು
3) ದೊಡ್ಡ ಪ್ರಮಾಣದ ಮೆಗ್ನೀಸಿಯಮ್ ಮತ್ತು ಅಲ್ಯೂಮಿನಿಯಂ  ಹೊಂದಿರುವುದು
4) ದೊಡ್ಡ ಪ್ರಮಾಣದ ಮೆಗ್ನೀಸಿಯಮ್ ಮತ್ತು ನಿಕ್ಕಲ್  ಹೊಂದಿರುವುದು



16) ವಾಯುಮಂಡಲದ ಅತ್ಯಂತ ಕೆಳಸ್ಥರ,
1) ಮೆಸೋಸ್ಪಿಯರ್ / ಮದ್ಯಂತರ ಮಂಡಲ
2) ಟ್ರೋಪೋಸ್ಪಿಯರ್ / ಪರಿವರ್ತನಾ ಮಂಡಲ ✔️
3) ವಾಯುಮಂಡಲ / ಸಮೋಷ್ಣ ಮಂಡಲ
4) ಥರ್ಮೋಸ್ಫಿಯರ್ / ಉಷ್ಣತಾ ಮಂಡಲ




17) ದೇಶದ ಮತ್ತು ಚಂಡಮಾರುತಗಳ ಸರಿಯಾದ ಹೊಂದಾಣಿಕೆ
l) ಜಪಾನ್ ಎ) ವರ್ಲ್‌ಪೂಲ್
2) ಅಮೇರಿಕಾ ಬಿ) ಚಂಡಮಾರುತ
3) ಭಾರತ ಸಿ) ಚಂಡಮಾರುತ
4) ರಷ್ಯಾ ಡಿ) ಟೈಫೂನ್

1) 1-ಸಿ, 2-ಬಿ, 3-ಎ, 4-ಡಿ
2) 1-ಡಿ, 2-ಸಿ, 3-ಬಿ, 4-ಎ ✔️
3) 1-ಎ, 2-ಡಿ, 3-ಸಿ, 4-ಬಿ
4) 1-ಬಿ, 2-ಎ, 3-ಡಿ, 4-ಸಿ



18) ಒಂದೇ ಪ್ರಮಾಣದ ಒತ್ತಡವನ್ನು ಹೊಂದಿರುವ ಸ್ಥಳಗಳನ್ನು ಸಂಪರ್ಕಿಸುವ, ಗ್ಲೋಬ್‌ನಲ್ಲಿ ಎಳೆದ ರೇಖೆಗಳು ಎಂದರೆ
1) ಐಸೊಥೆರ್ಮ್ಸ್ / ಸಮೋಷ್ಣ ರೇಖೆಗಳು
2) ಐಸೊಬಾರ್ಸ / ಸಮಬಾರ ರೇಖೆಗಳು ✔️
3) ಐಸೋಹೈಟ್ಸ್ / ಸಮವರ್ಷ ರೇಖೆಗಳು
4) ಐಸೋಹೆಲ್ಸ್ / ಸಮಸೂರ್ಯ ರೇಖೆಗಳು




21) ಹೇಳಿಕೆ ಎ : - ಪರಿಸರಣ ಮಳೆಯನ್ನು 'ಮಧ್ಯಾಹ್ನ ಮಳೆ' ಎಂದು ಕರೆಯಲಾಗುತ್ತದೆ
ಹೇಳಿಕೆ ಬಿ :  ಇಂತಹ ಪ್ರದೇಶಗಳಲ್ಲಿ ಉಷ್ಣಾಂಶ ಹೆಚ್ಚಳದಿಂದ ನೀರು ಆವಿಯಾಗಿ, ಮೋಡವಾಗಿ ಮದ್ಯಾಹ್ನದ ವೇಳೆ ಮಳೆಯಾಗುತ್ತದೆ
1) ಎರಡೂ ಹೇಳಿಕೆಗಳು ಸರಿಯಾಗಿವೆ ಆದರೆ 'ಬಿ' ಹೇಳಿಕೆಯು 'ಎ' ಅನ್ನು ವಿವರಿಸುವುದಿಲ್ಲ
2) ಎರಡೂ ಹೇಳಿಕೆಗಳು ತಪ್ಪು
3) 'ಎ ಮತ್ತು' ಬಿ 'ಎರಡೂ ಹೇಳಿಕೆಗಳು ಸರಿಯಾಗಿವೆ ಮತ್ತು' ಬಿʼ ಯು ಎ ಗೆ ಸೂಕ್ತ ವಿವರಣೆಯಾಗಿದೆ ✔️
4) 'ಎ ತಪ್ಪು' ಮತ್ತು 'ಬಿ' ಹೇಳಿಕೆ ಸರಿಯಾಗಿದೆ




22) ಗಲ್ಫ್ ಸ್ಟ್ರೀಮ್ ಸಾಗರ ಪ್ರವಾಹವು ಉಗಮಗೊಂಡು ಪ್ರವಹಿಸುವ ಸಾಗರ
1) ಪೆಸಿಫಿಕ್ ಸಾಗರ
2) ಹಿಂದೂ ಮಹಾ ಸಾಗರ
3) ಅಟ್ಲಾಂಟಿಕ್ ಸಾಗರ ✔️
4) ಆರ್ಕ್ಟಿಕ್ ಸಾಗರ



23) ಅಮಾವಾಸ್ಯೆ ಮತ್ತು ಹುಣ್ಣಿಮೆಯಲ್ಲಿ ಸಂಭವಿಸುವ ಉಬ್ಬರವಿಳಿತಗಳನ್ನು  ಹೀಗೆ ಕರೆಯಲಾಗುತ್ತದೆ
l) ಹೈಟೈಡ್ / ಏರುಬ್ಬರ
2) ಲೋಟೈಡ್ / ಇಳಿಉಬ್ಬರ
3) ನೀಪ್ಟೈಡ್ / ಕನಿಷ್ಟ ಉಬ್ಬರ
4) ಅಧಿಕ ಉಬ್ಬರ ✔️



24) ಭೂ ಭಾಗದಿಂಧ ಸುತ್ತುವರೆಯಲ್ಪಟ್ಟ ಅರ್ಧವೃತ್ತಾಕಾಋದ ಸಮುದ್ರಭಾಗವನ್ನು ಹೀಗೆನ್ನುವರು
l) ಖಾರಿ
2) ಕೊಲ್ಲಿ ✔️
3) ಜಲಸಂಧಿ
4) ಭೂಕಂಠ



25) ಕೆಳಗೆ ನೀಡಲಾದ ಚಿತ್ರವು ಇದಕ್ಕೆ ಸಂಬಂಧಿಸಿದೆ





1) ಸಾಗರ ಪ್ರವಾಹಗಳು
2) ಸಾಗರ ತಳದ ಭೂಸ್ವರೂಪಗಳು ✔️
3) ಸಮುದ್ರದ ಅಲೆಗಳು
4) ನದಿ ಸಂಚಯನದಿಂದ ಭೂಸ್ವರೂಪ



26) ಸಮುದ್ರದ ನೀರಿನ ಸರಾಸರಿ ಲವಣಾಂಶ
1) 35 ಪಿಪಿಟಿ ✔️
2) 20 ಪಿಪಿಟಿ
3) 25 ಪಿಪಿಟಿ
4) 30 ಪಿಪಿಟಿ



27) ಈ ಕೆಳಗಿನವುಗಳಲ್ಲಿ ನೈಸರ್ಗಿಕ / ಸ್ವಾಭಾವಿಕ ಮಾಲಿನ್ಯಕಾರಕವಾಗಿದೆ
1) ಜ್ವಾಲಾಮುಖಿಗಳು ✔️
2) ಪರಮಾಣು ವಿದ್ಯುತ್ ಸ್ಥಾವರಗಳು
3) ಗೃಹ ತ್ಯಾಜ್ಯಗಳು
4) ಕೈಗಾರಿಕಾ ತ್ಯಾಜ್ಯಗಳು



28) ಜಲ ಮಾಲಿನ್ಯದ ಪರಿಣಾಮಗಳು
ಎ) ಹಸಿರುಮನೆ ಪರಿಣಾಮ
ಬಿ) ಸಾಂಕ್ರಾಮಿಕ ರೋಗಗಳ ಹರಡುವಿಕೆ 
ಸಿ)  ಓಝೋನ್  ಸವಕಳಿ
ಡಿ) ಜಲಚರಗಳ ಸಾವು

1) ಎ, ಬಿ, ಸಿ ಸರಿಯಾಗಿವೆ
2) ಬಿ ಮತ್ತು ಡಿ ಮಾತ್ರ ಸರಿಯಾಗಿವೆ ✔️
3) ಎ ಮತ್ತು ಸಿ ಮಾತ್ರ ಸರಿಯಾಗಿವೆ
4) ಎ, ಬಿ, ಸಿ ಮತ್ತು ಡಿ ಎಲ್ಲವೂ ಸರಿಯಾಗಿವೆ



29) ಆಮ್ಲ ಮಳೆ ‌ ಎಂದರೆ
ಎ) ಆಮ್ಲವು ಮಳೆಯಂತೆ ಸುರಿಯುತ್ತದೆ
ಬ) ಮಳೆ ನೀರನ್ನು ಆಮ್ಲವಾಗಿ ಪರಿವರ್ತಿಸಲಾಗುವುದು
ಸಿ) ಮಳೆ ಹನಿಗಳನ್ನು ಕಪ್ಪು ಬಣ್ಣಕ್ಕೆ ತಿರುಗಿಸಲಾಗುವುದು
d) ಆಮ್ಲಗಳು ಮಳೆ ಹನಿಗಳು ಮತ್ತು ಪತನಗಳಲ್ಲಿ ವಿಲೀನಗೊಂಡು ಮಳೆಯಾಗುವುದು ✔️




30) ಓಝೋನ್ ಪದರವನ್ನು ರಕ್ಷಿಸುವುದು ನಮ್ಮ ಕರ್ತವ್ಯ ಇದಕ್ಕೆ ಪೂರಕವಾದ  ಹೇಳಿಕೆಯನ್ನು ಗುರುತಿಸಿ
1) ಜೀವಿಗಳ ವಿನಾಶವನ್ನು ನಾವು ತಡೆಯಬಹುದು ✔️
2) ನಾವು ಹಸಿರು ಮನೆ ಪರಿಣಾಮವನ್ನು ತಡೆಯಬಹುದು
3) ನಾವು ವಾತಾವರಣದ ತಾಪಮಾನದ ಸಮತೋಲನವನ್ನು ಕಾಪಾಡಿಕೊಳ್ಳಬಹುದು
4) ಆಮ್ಲ ಮಳೆ ಯಾಗುವುದನ್ನು ನಾವು ತಡೆಯಬಹುದು



31) ಸರಕು ಮತ್ತು ಸೇವೆಗಳನ್ನು ಬಳಸುವ ಜನರನ್ನು ಹೀಗೆಂದು ಕರೆಯಲಾಗುತ್ತದೆ
1) ಉತ್ಪಾದಕರು
2) ಗ್ರಾಹಕರು ✔️
3) ವಿತರಕರು
4) ಚಿಲ್ಲರೆ ವ್ಯಾಪಾರಿಗಳು



32) ಆರ್ಥಿಕ ಚಟುವಟಿಕೆಯ ಮೂಲ ಅಂಶಗಳು
1) ಉತ್ಪಾದನೆ ಮತ್ತು ವಿತರಣೆ
2) ಆದಾಯ ಗಳಿಕೆ ಮತ್ತು ವೆಚ್ಚ ✔️
3) ಮಾರಾಟ ಮತ್ತು ವಿನಿಮಯ
4) ಆದಾಯ ಗಳಿಕೆ ಮತ್ತು ಉಳಿತಾಯ



33) "ಅರ್ಥಶಾಸ್ತ್ರವು ಜೀವನದ ಸಾಮಾನ್ಯ ವ್ಯವಹಾರದಲ್ಲಿರುವ ಜನರ ಅಧ್ಯಯನವಾಗಿದೆ" ಈ ವ್ಯಾಖ್ಯಾನವು ನೀಡಿದವರು
1) ಆಲ್ಫ್ರೆಡ್ ಮಾರ್ಷಲ್ ✔️
2) ಸ್ಯಾಮುಯೆಲ್ಸನ್
3) ಆಡಮ್ ಸ್ಮಿತ್
4) ಎ.ಸಿ ಪಿಗೂ



34)ವಿಶಾಲಾತ್ಮಕ ಅರ್ಥಶಾಸ್ತ್ರವು ಅಭ್ಯಸಿಸುವ ಅಂಶಗಳನ್ನು ಗುರುತಿಸಿ
1) ರಾಷ್ಟ್ರೀಯ ಆದಾಯ, ರಾಷ್ಟ್ರದ ಒಟ್ಟು ಅನುಭೋಗಿ ವೆಚ್ಚ
2) ಹಣದುಬ್ಬರ ಅಥವಾ ಬೆಲೆ ಏರಿಕೆ 
3) ನಿರುದ್ಯೋಗ, ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿ
4) ವ್ಯಕ್ತಿಗಳು, ಮನೆಗಳು ಮತ್ತು ವ್ಯಾಪಾರ ಸಂಸ್ಥೆಗಳ ನಿರ್ಧಾರಗಳು


1) 1, 2, 3, 4 ಎಲ್ಲವೂ ಸರಿಯಾಗಿವೆ
2) 1, 2, 3 ಮಾತ್ರ ಸರಿಯಾಗಿವೆ ✔️
3) 2 ಮತ್ತು 3 ಮಾತ್ರ ಸರಿಯಾಗಿವೆ
4) 3 ಮತ್ತು 4 ಮಾತ್ರ ಸರಿಯಾಗಿವೆ



35) ಹೇಳಿಕೆ ಎ: -  ದರೋಡೆ, ಕಳ್ಳಸಾಗಣೆ ಮತ್ತು ಇತರವು ಕಾನೂನುಬಾಹಿರ ಚಟುವಟಿಕೆಗಳಾಗಿವೆ 
ಹೇಳಿಕೆ ಬಿ:- ವ್ಯಕ್ತಿಯು ಆದಾಯವನ್ನು ಗಳಿಸಿದರೂ, ಅವು ಸಮಾಜಕ್ಕೆ ಹಾನಿಕಾರಕ ಮತ್ತು ದೇಶದ ಆರ್ಥಿಕ ಪ್ರಗತಿಗೆ ಅಡ್ಡಿಯಾಗುತ್ತವೆ
1) ಎರಡೂ ಹೇಳಿಕೆಗಳು ಸರಿಯಾಗಿವೆ, ಹೇಳಿಕೆ ಬಿ ಎಂಬುದು ಎ ಗೆ ಸರಿಯಾದ ವಿವರಣೆಯಾಗಿದೆ ✔️
2) ಹೇಳಿಕೆ ಎ ಮತ್ತು ಬಿ ಸರಿಯಾಗಿದೆ. ಆದರೆ ಹೇಳಿಕೆ ಬಿ ಹೇಳಿಕೆಯನ್ನು ಎ ವಿವರಿಸುವುದಿಲ್ಲ
3) ಎ ಮತ್ತು ಬಿ ಹೇಳಿಕೆ ಎರಡೂ ತಪ್ಪು
4) ಹೇಳಿಕೆ ಎ ತಪ್ಪು. ಹೇಳಿಕೆ ಬಿ ಸರಿಯಾಗಿದೆ



36) ಅರ್ಥಶಾಸ್ತ್ರದ ಪಿತಾಮಹ
l) ಆಡಮ್ ಸ್ಮಿತ್ ✔️
2) ಅರಿಸ್ಟಾಟಲ್
3) ಹೆರೊಡೋಟಸ್
4) ವುಡ್ರೊ ವಿಲ್ಸನ್




37) ಅಭಿವೃದ್ಧಿಶೀಲ ರಾಷ್ಟ್ರಗಳ ವಿಶಿಷ್ಟ ಒಂದು ಲಕ್ಷಣವೆಂದರೆ
1) ಅಧಿಕ ರಾಷ್ಟ್ರೀಯ ಆದಾಯ ಹೊಂದಿರುತ್ತದೆ
2)ಬದಲಾಗುತ್ತಿರುವ ಉತ್ಪಾದನಾ ತಂತ್ರಜ್ಞಾನವನ್ನು ಬಳಸಲಾಗುತ್ತದೆ
3) ದ್ವಿತೀಯ ಮತ್ತು ತೃತೀಯ ಕ್ಷೇತ್ರಗಳಿಗೆ ಪ್ರಾಮುಖ್ಯತೆ
4) ಪ್ರಾಥಮಿಕ ವಲಯ ಮಾತ್ರ ಪ್ರಧಾನವಾಗಿರುತ್ತದೆ ✔️



38) ಈ ಕೆಳಗಿನವುಗಳಲ್ಲಿ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದ ಸರಿಯಾದ ಹೇಳಿಕೆ
1) ಆರ್ಥಿಕ ವ್ಯವಸ್ಥೆಯಲ್ಲಿ ಅನುಭೋಗಿಯೇ ಸಾರ್ವಭೌಮ ✔️
2) ಯಾವುದೇ ವರ್ಗ ಸಂಘರ್ಷ ಇರುವುದಿಲ್ಲ
3) ಜನರ ಕಲ್ಯಾಣಕ್ಕಾಗಿ ಸರ್ಕಾರವೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ
4) ಸಂಪತ್ತಿನ ಒಡೆತನವು ಸಾಮೂಹಿಕವಾಗಿರುತ್ತದೆ



39) ಆಧುನಿಕ ಆರ್ಥಿಕ ವ್ಯವಸ್ಥೆಯನ್ನು ನಿಯಂತ್ರಿಸುವ ಸಂಸ್ಥೆಗಳ ಗುಂಪು
l) ಎನ್ಐಟಿಐ ಅಯೋಗ್, ಐಎಂಎಫ್, ಯುನೆಸ್ಕೋ
2) ಸೆಬಿ, ಡಬ್ಲ್ಯುಎಚ್‌ಒ, ಡಬ್ಲ್ಯುಎಫ್‌ಒ
3) ಡಬ್ಲ್ಯುಎಚ್‌ಒ, ಆರ್‌ಬಿ.ಐ, ಯೂನಿಸೆಫ್
4) ಆರ್‌ಬಿಐ, ಸೆಬಿ, ಐಎಂಎಫ್‌‌ ✔️



40) ಭಾರತದ ರಾಷ್ಟ್ರೀಯ ಆದಾಯವನ್ನು ಅಂದಾಜು ಮಾಡುವ ಮತ್ತು ಪ್ರಕಟಿಸುವ ಸಂಸ್ಥೆ
1) ರಿಸರ್ವ್ ಬ್ಯಾಂಕ್ ಆಫ್ ಲಿಂಡಿಯಾ
2) ಸೆಬಿ
3) ಕೇಂದ್ರೀಯ ಅಂಕಿಸಂಖ್ಯಾ ಸಂಸ್ಥೆ ✔️
4) ಹಣಕಾಸು ಆಯೋಗ



41) ಈ ಕೆಳಗಿನವುಗಳಲ್ಲಿ ಸೇವಾ ವಲಯವನ್ನು ಗುರುತಿಸಿ
l) ಪಶುಸಂಗೋಪನೆ
2) ಕಟ್ಟಡ ನಿರ್ಮಾಣ
3) ಮೀನುಗಾರಿಕೆ
4) ಶಿಕ್ಷಣ ಸಂಸ್ಥೆಗಳು ✔️



42) ಈ ಕೆಳಗಿನ ಪರಿಸ್ಥಿತಿಯಲ್ಲಿ ರೈತರು 'ಬೆಳೆ ವಿಮೆ' ಪಡೆಯುತ್ತಾರೆ
1) ರೈತರು ತಮ್ಮ ಬೆಳೆಗಳಿಗೆ ಕಡಿಮೆ ಬೆಲೆ ಪಡೆದಾಗ
2) ರೈತರಿಂದ ಸಾಲ ಮರುಪಾವತಿಗಾಗಿ
3) ಎಲ್ಲಾ ರೀತಿಯ ಅಪಾಯಗಳಿಂದ ಫಸಲು ನಷ್ಟವಾದಾಗ ✔️
4) ರೈತರ ಭೂಮಿಯನ್ನು ಅಭಿವೃದ್ಧಿಪಡಿಸಲು



43) ರಾಷ್ಟ್ರೀಯ ಆದಾಯ ಎಂದರೆ
1) ಒಂದು ದೇಶದಲ್ಲಿ ವಾರ್ಷಿಕವಾಗಿ ಉತ್ಪಾದಿಸುವ ಸರಕುಗಳ ಒಟ್ಟು ಮೌಲ್ಯ
2) ಒಂದು ದೇಶದಲ್ಲಿ ವಾರ್ಷಿಕವಾಗಿ ಒದಗಿಸುವ ಸೇವೆಗಳ ಒಟ್ಟು ಮೌಲ್ಯ
3) ಒಂದು ದೇಶದ ಜನರ ಸರಾಸರಿ ಆದಾಯ
4) ಒಂದು ದೇಶದಲ್ಲಿ ವಾರ್ಷಿಕವಾಗಿ ಉತ್ಪಾದಿಸುವ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯ ✔️



44) 25 ಲಕ್ಷ ರೂಪಾಯಿಗಳ ವರೆಗೆ ಯಂತ್ರೋಪಕರಣಗಳಲ್ಲಿ ಹೂಡಿಕೆ ಮಾಡುವ ಉದ್ಯಮವನ್ನು ಹೀಗೆ ಕರೆಯಲಾಗುತ್ತದೆ
1) ಅತಿ ಸಣ್ಣ ಉದ್ಯಮಗಳು ✔️
2) ಬೃಹತ್ ಉದ್ಯಮಗಳು
3) ಮಧ್ಯಮ ಉದ್ಯಮಗಳು
4) ಸಣ್ಣ ಉದ್ಯಮಗಳು




45) ‌ಇತ್ತೀಚೆಗೆ ಕೃಷಿಯಲ್ಲಿ ಆಕರ್ಷಣೆ ಕಡಿಮೆಯಾಗಿ,  ಜನರು ಕೃಷಿಯನ್ನು ತ್ಯಜಿಸುವವರ ಸಂಖ್ಯೆ ಹೆಚ್ಚಾಗಲು ಕಾರಣ,
1) ನಗರಗಳಿಗೆ ವಲಸೆ ಹೋಗುತ್ತರುವುದು
2) ಇತರ ಉದ್ಯೋಗಗಳಲ್ಲಿ ಆಸಕ್ತಿ 
3) ಕೇಷಿ ಆದಾಯ, ಇಳುವರಿ ಬೆಲೆ, ಸಾಲ ಸಂಬಂಧಿತ ಸಮಸ್ಯೆಗಳು ✔️
4) ಕೈಗಾರಿಕೆಗಳಲ್ಲಿ  ಹೆಚ್ಚಿನ ಉದ್ಯೋಗ ಅವಕಾಶಗಳು




46) ಸಣ್ಣ ಮತ್ತು ತರುಣ ಉದ್ಯಮೆದಾರರಿಗೆ  ಸಾಲ ಸೌಲಭ್ಯವನ್ನು ಒದಗಿಸಲು  ಜಾರಿಗೆ ತಂದಿರುವ ಯೋಜನೆ
1) ಪ್ರಧಾಮಂತ್ರಿ ಗ್ರಾಮ ಸಡಕ್ ಯೋಜನೆ
2) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ
3) ಪ್ರಧಾನಮಂತ್ರಿ ಫಸಲು ವಿಮಾ ಯೋಜನೆ
4) ಪ್ರಧಾನ್ ಮಂತ್ರಿ ಮುದ್ರ ಯೋಜನೆ ✔️



47) ನೀತಿ ಆಯೋವನ್ನು ಅನುಷ್ಟಾನಗೊಳಿಸಿರುವುದರ ಉದ್ದೇಶ,
1) ಆರ್ಥಿಕತೆಗೆ ನಿರ್ದಿಷ್ಟ ನಿರ್ದೇಶನ ನೀಡುವುದಕ್ಕಾಗಿ
2) ದೀರ್ಘಾವಧಿಯ ಮುನ್ನೋಟ ತಂತ್ರಗಳನ್ನು ಸಿದ್ಧಪಡಿಸುವುದಕ್ಕಾಗಿ ✔️
3)  ಹಣಕಾಸು ವ್ಯವಸ್ಥೆಯನ್ನು ನಿಯಂತ್ರಿಸುವುದಕ್ಕಾಗಿ
4) ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸುವುದಕ್ಕಾಗಿ



48) ಈ ಕೆಳಗಿನವುಗಳಲ್ಲಿ  ವಸ್ತುಗಳ ಉತ್ಪಾದನೆಯನ್ನು ಹೆಚ್ಚಿಸುವಂತಹ ಅಂಶ
1) ನಗರೀಕರಣ
2) ವಸ್ತು ವಿನಿಮಯ ಪದ್ಧತಿ
3) ಶ್ರಮ ವಿಭಜನೆ ✔️
4) ಕೃಷಿ


49) "ಉಷ್ಣಾಂಶ ವಿಪರ್ಯಯ" ಎಂದರೆ
1) ಎತ್ತರ ಹೆಚ್ಚಾದಂತೆ ತಾಪಮಾನವು ಕಡಿಮೆಯಾಗುವುದು
2) ಎತ್ತರ ಹೆಚ್ಚಾದಂತೆ ತೇವಾಂಶದಲ್ಲಿ ಬದಲಾವಣೆಯಾಗುವುದು
3)  ಎತ್ತರ ಹೆಚ್ಚಾದಂತೆ ಕೆಲವು ವಿಶೇಷ ಸಂದರ್ಭಗಳಲ್ಲಿ ತಾಪಮಾನ ಹೆಚ್ಚಾಗುವುದು ✔️
4) ಎತ್ತರ ಹೆಚ್ಚಾದಂತೆ ಒತ್ತಡ ಕಡಿಮೆಯಾಗುವುದು



50) ಕಾಲಾಂತರದಲ್ಲಿ ಪದೇ ಪದೇ ಗಾಳಿಗೆ ಬಿಸಿನೀರು ಮತ್ತು ಹಬೆಯನ್ನು ಎಸೆಯುವ ಚಿಲುಮೆ
1) ಬಿಸಿನೀರಿನ ಬುಗ್ಗೆಗಳು
2) ಗೀಸರ್ ಗಳು ✔️
3) ನಿರಂತರ ಚಿಲುಮೆಗಳು
4) ನಿಯತಕಾಲಿಕ ಚಿಲುಮೆಗಳು










 ..........  END .........
 
 
 
 
 
 





 
 
 
 






No comments: